ಐಟಿ ಕಚೇರಿಗೆ ಬಾಂಬ್ ಬೆದರಿಕೆ

ಐಟಿ ಕಚೇರಿಗೆ ಬಾಂಬ್ ಬೆದರಿಕೆ

ಬೆಂಗಳೂರು, ಅ. 24 : ಬಾಂಬ್ ಬೆದರಿಕೆ ಬಂದ ಹಿನ್ನಲೆ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳಗಳು ಸ್ಥಳಪರಿಶೀಲನೆ ನಡೆಸಿವೆ. ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿಯಲ್ಲಿ ಕಸ್ಟಮ್ಸ್ ಡೆಪ್ಯುಟಿ ಕಮಿಷನರ್ಗೆ ತಡರಾತ್ರಿ 10.45ಕ್ಕೆ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಬಂದಿತ್ತು. ತಡರಾತ್ರಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ 300 ಪೊಲೀಸರು ಕಸ್ಟಮ್ಸ್ ಮತ್ತು ಐಟಿ ಕಚೇರಿಗೆ ದೌಡಾಯಿಸಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ರಾತ್ರಿ ಇಡೀ ತಪಾಸಣೆ ನಡೆಸಿದ್ದು, ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಪ್ರೋಟಾನ್ ಡಾರ್ಕ್ ನೆಟ್ ಮೂಲಕ ಇ-ಮೇಲ್ ರವಾನೆಯಾಗಿದೆ. ಐಟಿ ಉದ್ಯೋಗಿ ಗೋವಿಂದ್ ಎಂಬಾತ ಇ-ಮೇಲ್ ರವಾನಿಸಿರುವ ಶಂಕೆ ಇದ್ದು, ತನಿಖೆ ಮುಂದುವರಿದಿದೆ. ವಿಷಯ ತಿಳಿದು ಕಂಗಾಲಾಗಿರುವ ಉದ್ಯೋಗಿಗಳು ಕಚೇರಿ ಒಳಗೆ ಪ್ರವೇಶಿಸಲು ಭಯಪಡುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos