ಬೆಂಗಳೂರು-ಮಂಗಳೂರಿಗೂ ಇಂಡಿಗೊ ವಿಮಾನಯಾನ ಸೇವೆ

ಬೆಂಗಳೂರು-ಮಂಗಳೂರಿಗೂ ಇಂಡಿಗೊ ವಿಮಾನಯಾನ ಸೇವೆ

ಮಂಗಳೂರು ಮಾ.19, ನ್ಯೂಸ್ ಎಕ್ಸ್ ಪ್ರೆಸ್: ಮಂಗಳೂರು-ಬೆಂಗಳೂರು ನಡುವೆ ಮತ್ತೊಂದು ಹೊಸ ವಿಮಾನಯಾನ ಸೇವೆಯನ್ನು ಇಂಡಿಗೊ ಆರಂಭಿಸಲಿದ್ದು, 14 ಹೊಸ ವಿಮಾನಗಳನ್ನು ಸೇರ್ಪಡೆ ಮಾಡುತ್ತಿದೆ.

ಹೊಸ ವಿಮಾನಯಾನ ಬೆಳಗ್ಗೆ 7.30 ಕ್ಕೆ ಬೆಂಗಳೂರಿನಿಂದ ಹೊರಟು 8.40 ಕ್ಕೆ ಮಂಗಳೂರು ತಲುಪಲಿದೆ. ಬಳಿಕ 9.30 ಕ್ಕೆ ಮಂಗಳೂರಿನಿಂದ ಹೊರಟು 10.30 ಕ್ಕೆ ಬೆಂಗಳೂರು ತಲುಪಲಿದೆ.

ಇಂಡಿಗೊ ಚೆನ್ನೈ-ರಾಯಪುರ, ಹೈದರಾಬಾದ್-ಗೊರಖ್ ಪುರ ಮತ್ತು ಕೋಲ್ಕತ್ತಾ-ಗೋರಖ್ ಪುರಗಳ ನಡುವೆ ತನ್ನ ಮೊದಲ ವಿಮಾನ ಆರಂಭಿಸಲಿದೆ. ಪ್ರಸ್ತುತದ ಚೆನ್ನೈ-ತಿರುವನಂತಪುರ, ಬೆಂಗಳೂರು-ಉದಯಪುರು ಮತ್ತು ಬೆಂಗಳೂರು ಚೆನ್ನೈ ಮಾರ್ಗಗಳಿಗೆ ಹೆಚ್ಚು ವಿಮಾನಗಳ ಸೇರ್ಪಡೆ ಮಾಡಲಿದೆ.

ಫ್ರೆಶ್ ನ್ಯೂಸ್

Latest Posts

Featured Videos