ಬ್ಯಾಡ್ಮಿಂಟನ್​ ಲೀಗ್​ನಲ್ಲಿ ಚಾಂಪಿಯನ್​ ಆದ ಬೆಂಗಳೂರು

  • In Sports
  • January 14, 2019
  • 213 Views
ಬ್ಯಾಡ್ಮಿಂಟನ್​ ಲೀಗ್​ನಲ್ಲಿ ಚಾಂಪಿಯನ್​ ಆದ ಬೆಂಗಳೂರು

ಬೆಂಗಳೂರು: ಕರ್ನಾಟಕ ಕ್ರೀಡಾ ಲೋಕದಲ್ಲಿ ಕಪ್​ ನಮ್ದೇ ಅನ್ನೋ ಡೈಲಾಗ್​ ಸಖತ್ತಾಗೇ ಸುದ್ದಿ ಮಾಡುತ್ತಿದೆ. ಅದಕ್ಕೆ ತಕ್ಕಹಾಗೇ ಐಪಿಎಲ್​ನಲ್ಲಿ ಬೆಂಗಳೂರು ತಂಡ ಪ್ರದರ್ಶನ ನೀಡಿಲ್ಲ. ಆದರೆ, ಕೆಲವೇ ದಿನಗಳ ಹಿಂದಷ್ಟೇ ಬೆಂಗಳೂರು ಬುಲ್ಸ್​ ಈ ಪದಕ್ಕೆ ಅರ್ಥ ತಂದುಕೊಟ್ಟಿತ್ತು. ಇದೀಗ ಬ್ಯಾಡ್ಮಿಂಟನ್​ನಲ್ಲೂ ಈ ಮಾತು ಸಾರ್ಥಕವಾಗಿದೆ.

ನಾಲ್ಕನೇ ಆವೃತ್ತಿಯ ಬ್ಯಾಡ್ಮಿಂಟನ್​ ಪ್ರೀಮಿಯರ್​ ಲೀಗ್​ನಲ್ಲಿ ಬೆಂಗಳೂರು ರ್ಯಾಪ್ಟರ್ಸ್​ ತಮ್ಮ ಸಾಮರ್ಥ್ಯ ತೋರಿದ್ದಾರೆ. ಕಿದಂಬಿ ಶ್ರೀಕಾಂತ್​ ನೇತೃತ್ವದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಬೆಂಗಳೂರು ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ತೀವ್ರ ಹಣಾಹಣಿಯಿಂದ ನಡೆದ ಪಂದ್ಯದಲ್ಲಿ ಆಲ್​ರೌಂಡ್​​ ಪ್ರದರ್ಶನ ನೀಡಿದ ರ್ಯಾಪ್ಟರ್ಸ್​ ಮುಂಬೈ ರಾಕೆಟ್ಸ್​​ ತಂಡವನ್ನು ಸೋಲಿಸಿದೆ.

ಭಾನುವಾರ ಬೆಂಗಳೂರಿನ ಕಂಠೀರವ ಇನ್ ​ಡೋರ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 4-3 ಅಂತರದಲ್ಲಿ ಮುಂಬೈ ತಂಡವನ್ನು ಬಗ್ಗುಬಡಿಯುವಲ್ಲಿ ಬೆಂಗಳೂರು ತಂಡ ಯಶಸ್ವಿಯಾಗಿದೆ. ಮುಂಬೈ ಟ್ರಂಪ್​ ಮ್ಯಾಚ್​ ಆಗಿ ಆಯ್ಕೆ ಮಾಡಿಕೊಂಡ ಮಿಕ್ಸಡ್​ ಡಬಲ್ಸ್​ನಲ್ಲಿ ಕಿಮ್​ ಜಂಗ್​ ಬೆರ್ನಾಡೆತ್​ ಜೋಡಿ 15-08, 15-14 ಅಂತರದಲ್ಲಿ ಮಾರ್ಕೆನ್​-ಲಾರೆನ್​ ಜೋಡಿ ವಿರುದ್ಧ ಶುಭಾರಂಭ ಮಾಡಿತ್ತು.  ಆ ನಂತರ ನಡೆದ ಪುರುಷರ ಸಿಂಗಲ್ಸ್​ನಲ್ಲಿ ಬೆಂಗಳೂರು ತಂಡದ ನಾಯಕ ಕಿದಂಬಿ ಶ್ರೀಕಾಂತ್​ 15-7, 15-10 ಸೆಟ್​ಗಳ ಅಂತರದಲ್ಲಿ ಗೆದ್ದು ಮತ್ತೊಂದು ಜಯ ತಂದು ಕೊಟ್ರು.

ಫ್ರೆಶ್ ನ್ಯೂಸ್

Latest Posts

Featured Videos