ವಿಶ್ವದ ಅಗ್ಗದ ನಗರಗಳಲ್ಲಿ ಬೆಂಗಳೂರಿಗೂ ಸ್ಥಾನವಿದೆಯಂತೆ!

ವಿಶ್ವದ ಅಗ್ಗದ ನಗರಗಳಲ್ಲಿ ಬೆಂಗಳೂರಿಗೂ ಸ್ಥಾನವಿದೆಯಂತೆ!

ಬೆಂಗಳೂರು, ಮಾ, 23, ನ್ಯೂಸ್ ಎಕ್ಸ್ ಪ್ರೆಸ್: 2019ರ ಎಕಾನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್‌ ನಡೆಸಿದ ಸರ್ವೇ ಪ್ರಕಾರ ಪ್ರಪಂಚದಲ್ಲಿ ಜೀವನ ನಡೆಸಲು ಯೋಗ್ಯವಾದ ನಗರಗಳಲ್ಲಿ ಭಾರತದ ಈ ಮೂರು ನಗರಗಳು ಬೆಸ್ಟ್ ಅಂತೆ. ಅವುಗಳೆಂದರೆ ದೆಹಲಿ, ಚೆನ್ನೈ ಹಾಗೂ ಬೆಂಗಳೂರು. ದೇಶದ ಅಗ್ಗದ ನಗರ ಅಯ್ಯೋ, ಬೆಂಗಳೂರು ಜೀವನ ನಡೆಸಲು ಯೋಗ್ಯವಾದ ಸ್ಥಳನಾ ಅಂದಾಗ ಕಂಡಿತಾ ಶಾಕ್ ಆಗುತ್ತದೆ! ಬೆಂಗಳೂರು ನಗರದಲ್ಲಿ ಎಲ್ಲದರ ಬೆಲೆಯೂ ಅಧಿಕ. ಕುಡಿಯುವ ನೀರಿನಿಂದ ಹಿಡಿದು ಪ್ರತಿಯೊಂದಕ್ಕೂ ಹಣ ಖರ್ಚು ಮಾಡಬೇಕು. ಮನೆ ಬಾಡಿಗೆಯೂ ಸಿಕ್ಕಾಪಟ್ಟೆ ಇದೆ. ಹೀಗಿರುವಾಗ ಬೆಂಗಳೂರು ಹೇಗೆ ಅಗ್ಗದ ನಗರವಾಗಲು ಸಾಧ್ಯ ಎಂದು ನೀವು ಚಿಂತಿಸೋದು ಸಹಜ.

ನಮ್ಮ ದೇಶದಲ್ಲಿ ಜೀವನ ಸಾಗಿಸಲು ಯೋಗ್ಯವಾದ ಸ್ಥಳ ಯಾವುದೆಂದರೆ ಸಣ್ಣಪುಟ್ಟ ಹಳ್ಳಿಯೋ, ಪಟ್ಟಣ ಪ್ರದೇಶವನ್ನು ಹೇಳಬಹುದು. ಆದರೆ ಅಗ್ಗದ ನಗರಗಳಲ್ಲಿ ಬೆಂಗಳೂರು ಇದೆ ನಾವ್ಯಾರೂ ನಂಬೋದಿಲ್ಲ, ಆದರೆ ಈಗ ನಂಬಲೇ ಬೇಕು. ಏಕೆಂದರೆ, ಈ ಸರ್ವೇ ಪ್ರಕಾರ ಬೆಂಗಳೂರು ಇತರ ನಗರಗಳಿಗೆ ಹೋಲಿಸಿದರೆ ಅಗ್ಗದ ನಗರವಂತೆ.

ಫ್ರೆಶ್ ನ್ಯೂಸ್

Latest Posts

Featured Videos