ಕೆಂಪೇಗೌಡ ವಿಮಾನ ನಿಲ್ದಾಣದ ಅಕ್ಕ- ಪಕ್ಕದ ನಿವಾಸಿಗಳಿಗೆ ತೊಂದರೆ.

ಕೆಂಪೇಗೌಡ ವಿಮಾನ ನಿಲ್ದಾಣದ ಅಕ್ಕ- ಪಕ್ಕದ ನಿವಾಸಿಗಳಿಗೆ ತೊಂದರೆ.

ಬೆಂಗಳೂರು, ಮೇ 13, ನ್ಯೂಸ್ ಎಕ್ಸ್ ಪ್ರೆಸ್: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅಗಲಗೊಳಿಸಲಾಗಿದ್ದು, ಇದರಿಂದ ಸುತ್ತಮುತ್ತಲಿನಲ್ಲಿ ವಾಸಿಸುವ ಹಳ್ಳಿ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಮನೆ, ರಸ್ತೆಗಳೆಲ್ಲವೂ ದೂಳು, ಮಣ್ಣಿನಿಂದ ತುಂಬಿ ಹೋಗಿದೆ, ಇದರಿಂದ ಜನರಿಗೆ ಹಲವು ರೋಗಗಳು ಬರುವ ಭೀತಿ ಕಾಡುತ್ತಿದೆ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ  ವಿಮಾನ ನಿಲ್ದಾಣ, ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಎರಡನೇ ರನ್‌ವೇ ನಿರ್ಮಾಣ ಕಾರ್ಯವನ್ನು 2017ರಲ್ಲೇ ಆರಂಭಿಸಲಾಗಿದ್ದು, ಇನ್ನೂ ಮುಗಿದಿಲ್ಲ. ಮೈಲನಹಳ್ಳಿ, ಬಿಕೆ ಹಳ್ಳಿ, ಬೇಗೂರು, ಚಿಕ್ಕನಹಳ್ಳಿ ನಿವಾಸಿಗಳು ಹೇಳುವ ಪ್ರಕಾರ ಅವರ ಮನೆ, ಜಮೀನು, ಬೆಳೆ, ಅಂಗಡಿಗಳು ಎಲ್ಲವೂ ಧೂಳಿನಿಂದ ಆವೃತವಾಗಿದೆ.

ಇದರಿಂದ ಸುಮಾರು ಕುಟುಂಬಗಳು ತೊಂದರೆ ಅನುಭವಿಸುತ್ತಿವೆ.ಒಂದು ಕಡೆಯಿಂದ ಮಣ್ಣನ್ನು ಅಗೆದು ಇನ್ನೊಂದು ಕಡೆಗೆ ಕೊಂಡೊಯ್ಯುತ್ತಾರೆ. ಗಾಳಿ ಬಂದಾಗ ದೂಳು,ಎಲ್ಲಾ  ಬೆಳೆಗಳು ಮತ್ತು ಮನೆಯ ಮೇಲೆ ಹೋಗಿ ತುಂಬಿಕೊಳ್ಳುತ್ತದೆ.

ಮನೆಯಲ್ಲಿರುವ ಎಲ್ಲಾ ಪದಾರ್ಥಗಳು, ವಸ್ತುಗಳ ಮೇಲೆ ದೂಳು ತುಂಬಿಕೊಂಡಿರುತ್ತದೆ ಎಂದು ಸ್ಥಳೀಯರು ದೂರಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos