ಬ್ಯಾಂಡ್ ವಾದನದೊಂದಿಗೆ ಮತದಾರರಿಗೆ ಸ್ವಾಗತ

ಬ್ಯಾಂಡ್ ವಾದನದೊಂದಿಗೆ ಮತದಾರರಿಗೆ ಸ್ವಾಗತ

ಬರೌತ್, ಏ. 11, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭೆ ಚುನಾವಣೆಗೆ ಮೊದಲ ಹಂತದ ಮತದಾನ ಇಂದ ಶುರುವಾಗಿದೆ. 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, 1 ಹಂತದಲ್ಲಿ 18 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 91 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಬೆಳಗ್ಗೆಯಿಂದಲೇ ಮತದಾರರು ಪೋಲಿಂಗ್ ಬೂತ್ಗಳಿಗೆ ಹೋಗಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಉತ್ತರಪ್ರದೇಶದ ಭಾಗ್ಪತ್ನ ಬರೌತ್ನಲ್ಲಿ ವಿಶಿಷ್ಟವಾಗಿ ಮತದಾರರನ್ನ ಬೂತ್ವೊಳಗೆ ಸ್ವಾಗತಿಸಲಾಗುತ್ತಿದೆ. ಇಲ್ಲಿನ ವಾರ್ಡ್ ನಂಬರ್ 126ರಲ್ಲಿ ಯುವಕರು ಬ್ಯಾಂಡ್ ವಾದನ ಮಾಡುತ್ತಾ, ಹೂವುಗಳನ್ನ ಹಾಕುತ್ತಾ ಮತದಾರರನ್ನು ಬರಮಾಡಿಕೊಳ್ಳುತ್ತಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos