ಬಹಿರಂಗವಾಯ್ತು ತಮಿಳು ಚಿತ್ರದಲ್ಲಿನ ‘ಬಿಗ್ ಬಿ’ ವಿಭಿನ್ನ ಲುಕ್

ಬಹಿರಂಗವಾಯ್ತು ತಮಿಳು ಚಿತ್ರದಲ್ಲಿನ ‘ಬಿಗ್ ಬಿ’ ವಿಭಿನ್ನ ಲುಕ್

. 2, ನ್ಯೂಸ್ ಎಕ್ಸ್ ಪ್ರೆಸ್: ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಅಮಿತಾಬ್, ಚಿತ್ರದಲ್ಲಿ ನಟಿಸಿದ ಪೋಟೊಗಳನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ತಮಿಳು ಚಿತ್ರಕ್ಕಾಗಿ ಅಮಿತಾಬ್ ಬಚ್ಚನ್ 40 ದಿನಗಳ ಕಾಲ್ ಶೀಟ್ ನೀಡಿದ್ದರು. ಆದರೆ ಅದಕ್ಕಿಂತ ಮುಂಚೆ ಬಚ್ಚನ್ ನಟನೆಯ ಭಾಗ ಭಾಗಶಃ ಮುಗಿಯುತ್ತಾ ಬಂದಿದೆ.

ಹಣೆಯ ತುಂಬ ವಿಭೂತಿ, ಅದರ ಮಧ್ಯೆ ಶ್ರೀಗಂಧವನ್ನ ಹಚ್ಚಿಕೊಂಡು ಸಂಪ್ರದಾಯ ತಮಿಳು ನಟನ ಹಾಗೆ ಕಂಡಿದ್ದಾರೆ. ತಮಿಳುನಾಡಿನ ನಟ ಎಸ್.ಜೆ. ಸೂರ್ಯ ಸಹ ಅಮಿತಾಬ್ ಬಚ್ಚನ್ ಜೊತೆ ನಟನೆ ಮಾಡುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

ನಾನು ತಮಿಳು ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಬರುವ ಮುಂಚೆ ಅಮಿತಾಬ್ ರ ಜೊತೆ ನಟಿಸುವ ಕನಸು ಕಂಡಿದ್ದೆ ಅದು ಇಂದು ಕೈಗೂಡಿದೆ ಎಂದು ತಮ್ಮ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos