ಬ್ಯಾಗ್ ನಲ್ಲಿ ಹೆಬ್ಬಾವು, ಹಲ್ಲಿಗಳು, ಇಬ್ಬರ ಆರೋಪಿಗಳ ಬಂಧನ

ಬ್ಯಾಗ್ ನಲ್ಲಿ ಹೆಬ್ಬಾವು, ಹಲ್ಲಿಗಳು, ಇಬ್ಬರ ಆರೋಪಿಗಳ ಬಂಧನ

ಚೆನ್ನೈ, ಅ. 11 : ಬ್ಯಾಗ್ ನಲ್ಲಿದ್ದಿದ್ದು ಬಟ್ಟೆ ಅಲ್ಲ ಅದರ ಬದಲು 2 ಹಸಿರು ಹೆಬ್ಬಾವುಗಳು ಮತ್ತು 14 ವಿವಿಧ ಜಾತಿಯ ಹಲ್ಲಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕೌಲಾಲಾಂಪುರ್ ದಿಂದ ಚೆನ್ನೈ ವಿಮಾನದಲ್ಲಿಳಿದ ಇಬ್ಬರ ಬ್ಯಾಗ್ ಗಳನ್ನು ಪರಿಶೀಲಿಸಿದ ಅಧಿಕಾರಿಗಳು ಸರಿಸೃಪಗಳನ್ನು ಸಾಗಿಸುತ್ತಿದ್ದ ರಾಮನಾಥಪುರಂ ಜಿಲ್ಲೆಯ ಮೊಹಮ್ಮದ್ ಪರ್ವೇಜ್ (36) ಮತ್ತು ಶಿವಗಂಗಾ ಜಿಲ್ಲೆಯ ಮೊಹಮ್ಮದ್ ಅಕ್ಬರ್ (28) ಬಂಧಿತರು.
ಅಕ್ರಮ ಸಾಗಾಣಿಕೆಯ ಖಚಿತ ಮಾಹಿತಿ ಪಡೆದಿದ್ದ ಅಧಿಕಾರಿಗಳು ಪ್ರಯಾಣಿಕರನ್ನು ಜಾಗರೂಕತೆಯಿಂದ ಪರಿಶೀಲಿಸುತ್ತಿದ್ದರು. ಆ ವೇಳೆ ಇ ಇಬ್ಬರ ಚಲನವಲನದಲ್ಲಿ ಅನುಮಾನ ಬಂದು ಪರಶೀಲನೆ ನಡೆಸಿದಾಗ ಸತ್ಯ ಹೊರಬಿತ್ತು. ಕೌಲಾಲಂಪುರದ ಹೊರವಲಯದಲ್ಲಿ ನಮಗೆ ಈ ಬ್ಯಾಗ್ ಕೊಟ್ಟಿದ್ದು, ಚೈನ್ನೈ ಹೊರವಲಯದ ವ್ಯಕ್ತಿಯೊಬ್ಬನಿಗೆ ತಲುಪಿಸುವಂತೆ ಹೇಳಲಾಗಿತ್ತು ಎಂದು ವರದಿಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos