ಹತ್ಯೆಯಾದ ಬಾಗ್ದಾದಿ ಸಹೋದರಿ ಸೆರೆ

ಹತ್ಯೆಯಾದ ಬಾಗ್ದಾದಿ ಸಹೋದರಿ ಸೆರೆ

ವಾಷಿಂಗ್ಟನ್, ನ. 5 : ಉಗ್ರ ಸಂಘಟನೆಯ ಮುಖ್ಯಸ್ಥ ಅಬುಬಕರ್ ಅಲ್ ಬಾಗ್ದಾದಿಯ ಸಹೋದರಿಯನ್ನು ಟರ್ಕಿ ಸೇನೆ ಬಂಧಿಸಿದೆ.

ಸಿರಿಯಾದಲ್ಲಿ ಇತ್ತೀಚೆಗಷ್ಟೇ ಅಮೆರಿಕಾ ಸೇನಾ ದಾಳಿ ವೇಳೆ ಹತನಾದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಮುಖ್ಯಸ್ಥ ಅಬುಬಕರ್ ಅಲ್ ಬಾಗ್ದಾದಿಯ ಉತ್ತರ ಸಿರಿಯಾದ ಎಜಾಜ್ ಪಟ್ಟಣದಲ್ಲಿ ತಲೆಮರೆಸಿಕೊಂಡು ತಿರುಗುತ್ತಿದ್ದ ಟರ್ಕಿ ಸೇನೆ ಸೆರೆ ಹಿಡಿದಿದೆ.
ಬಂಧನದ ವೇಳೆ ಆಕೆಯೊಂದಿಗೆ ಐದು ಜನ ಮಕ್ಕಳಿದ್ದರು. ರಸ್ಮಿಯಾ ಆವಾದ್ ಬಂಧನದ ಮೂಲಕ ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ವಿರುದ್ಧ ಸೇನೆ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಫ್ರೆಶ್ ನ್ಯೂಸ್

Latest Posts

Featured Videos