ಬಡವರ ಈಡೇರಿಕೆಯ ಈಡೇರಿಸಿದ ಸಿಎಂ

ಬಡವರ ಈಡೇರಿಕೆಯ ಈಡೇರಿಸಿದ ಸಿಎಂ

ಯಾದಗಿರಿ, ಜೂ. 22: ರಾಜ್ಯದ ರಾಜ್ಯಕಾರಣದಲ್ಲಿ ಹಲಾವಾರು ಬದಲಾವಣೆಗಳು ನಡೆಯುತ್ತಿದ್ದು, ಇದರ ಮದ್ಯ ರಾಜ್ಯದ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ತಮ್ಮ ಮೊದಲ ಗ್ರಾಮ ವಾಸ್ತವ್ಯವನ್ನು ಯಾದಗಿರಿ ಜಿಲ್ಲೆ ಗುರುಮಿಟ್ಕಲ್ ತಾಲೂಕಿನ ಚಂಡರಕಿ ಗ್ರಾಮದಿಂದ ಆರಂಭಿಸಿದ್ದಾರೆ. ಮುಖ್ಯಮಂತ್ರಿಗಳ ಮೊದಲ ಗ್ರಾಮ ವಾಸ್ತವ್ಯ ಯಶಸ್ವಿಯಾಗಿ ನೆರವೇರಿದ್ದು, ಸಾರ್ವಜನಿಕರ ಬಹುತೇಕ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲಾಗಿದೆ.

ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ನಡೆದ ಜನತಾದರ್ಶನದಲ್ಲಿ ಪಾಲ್ಗೊಂಡಿದ್ದ ಯಾದಗಿರಿ ತಾಲೂಕಿನ ಮುನಗಲ್ ಗ್ರಾಮದ ಮಹಿಳೆಯೊಬ್ಬರು, ಅಪಘಾತದಿಂದಾಗಿ ಕಳೆದ ಒಂದೂವರೆ ವರ್ಷದ ಹಿಂದೆ ಕೈ ಮತ್ತು ಕಾಲುಗಳು ಶಕ್ತಿಹೀನವಾಗಿ ಹಾಸಿಗೆ ಹಿಡಿದಿರುವ ತಮ್ಮ ಪುತ್ರ ಇಂಜಿನಿಯರಿಂಗ್ ಪದವೀಧರ ಭೀಮರೆಡ್ಡಿ ಶಂಕರಪ್ಪ ಅವರ ಪರಿಸ್ಥಿತಿಯನ್ನು ವಿವರಿಸಿ ತಮ್ಮ ಅಳಲು ತೋಡಿಕೊಂಡಿದ್ದರು.

ಆಗ ಕುಮಾರಸ್ವಾಮಿಯವರು 5 ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿದ್ದರಲ್ಲದೇ ಇಂದು ಬೆಳಿಗ್ಗೆ ಬಂದು ಪರಿಹಾರದ ಚೆಕ್ ಪಡೆದುಕೊಂಡು ಹೋಗಲು ಭೀಮರೆಡ್ಡಿ ಶಂಕರಪ್ಪ ಅವರ ಪೋಷಕರಿಗೆ ತಿಳಿಸಿದ್ದರು. ಅದರಂತೆ ಇಂದು ಭೀಮರೆಡ್ಡಿ ಶಂಕರಪ್ಪ ಅವರ ತಂದೆ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ 5 ಲಕ್ಷ ರೂ. ಗಳ ಪರಿಹಾರದ ಚೆಕ್ ಪಡೆದುಕೊಂಡಿದ್ದಾರೆ. ಭರವಸೆ ನೀಡಿದ್ದ ಮರುದಿನವೇ ಅದನ್ನು ಈಡೇರಿಸಿರುವುದಕ್ಕೆ ಕುಮಾರಸ್ವಾಮಿಯವರಿಗೆ ಆ ಕುಟುಂಬ ಧನ್ಯವಾದ ಅರ್ಪಿಸಿದೆ.

 

ಫ್ರೆಶ್ ನ್ಯೂಸ್

Latest Posts

Featured Videos