ಐಂದ್ರಿತಾ ಮತ್ತೆ ಸಿನಿರಂಗಕ್ಕೆ ಎಂಟ್ರಿ..!

ಐಂದ್ರಿತಾ ಮತ್ತೆ ಸಿನಿರಂಗಕ್ಕೆ ಎಂಟ್ರಿ..!

ಬೆಂಗಳೂರು, ಮೇ.17, ನ್ಯೂಸ್ ಎಕ್ಸ್ ಪ್ರೆಸ್: ನಟಿ ಮಣಿಯರು ಮದುವೆಯಾದ ಮೇಲೆ ಚಿತ್ರರಂಗದಿಂದ ದೂರ ಉಳಿದುಬಿಡುತ್ತಾರೆ ಎನ್ನುವ ಮಾತುಗಳಿವೆ. ಅದಕ್ಕೆ ಸಾಕಷ್ಟು ನಿದರ್ಶನಗಳು ಕೂಡ ಇವೆ. ವಿವಾಹದ ನಂತರ ನಟಿಮಣಿಯರು ಸಿನಿಮಾ ಮಾಡುವುದಿಲ್ಲ ಎನ್ನುವುದು ಹಳೆಯ ವಿಷಯವಾಗಿ ಬಿಟ್ಟಿದೆ. ಇದೀಗ ಸ್ಯಾಂಡಲ್ ವುಡ್ ನಲ್ಲೂ ಮದುವೆಯಾದ ಮೇಲಿಯೂ ಸಿನಿಮಾ ಮಾಡುವುದು ಟ್ರೆಂಡ್ ಆಗುತ್ತಿದೆ. ಇತ್ತೀಚೆಗಷ್ಟೇ ಮದುವೆಯಾದ ಐಂದ್ರಿತಾ ರೇ ಕೆಲವು ದಿನಗಳ ಬ್ರೇಕ್ ತೆಗೆದುಕೊಂಡು ಇದೀಗ ಮತ್ತೆ ಸಿನಿ ಲೋಕಕ್ಕೆ ಎಂಟ್ರಿ ಕೊಡುವ ಸುದ್ದಿ ನೀಡಿದ್ದಾರೆ. ‘ನೆನಪಿರಲಿ’ ಪ್ರೇಮ್ ಅಭಿನಯದಪ್ರೇಮಂ ಪೂಜ್ಯಂ’ ಸಿನಿಮಾಗೆ ನಾಯಕಿಯಾಗಿ ಐಂದ್ರಿತಾ ರೇ ಆಯ್ಕೆಯಾಗಿದ್ದಾರೆ. ಸಿನಿಮಾದ ಮೂಲಕ ಮದುವೆಯಾದ ನಂತರವು ಮೊದಲ ಸಿನಿಮಾಗೆ ಸಹಿ ಹಾಕಿದ್ದಾರೆ ಐಂದ್ರಿತಾ. ಐಂದ್ರಿತಾರ ಸಿನಿರಂಗದ ಸೆಕೆಂಡ್‍ ವಿನ್ನಿಂಗ್ಸ್‍ ಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos