ಮಗುವಿನ ಬಗ್ಗೆ ಅಕ್ಕರೆ ಮುದ್ದು ಮಾಡ್ಬೇಕು

ಮಗುವಿನ ಬಗ್ಗೆ ಅಕ್ಕರೆ ಮುದ್ದು ಮಾಡ್ಬೇಕು

ಆಗಷ್ಟೇ ಸ್ಕೂಲ್ನಿಂದ ಬಂದ ಮಗುವಿನ ಬಗ್ಗೆ ಅಕ್ಕರೆ, ಮುದ್ದು ಮಾಡ್ಬೇಕು ಅಂತ ಹತ್ರ ಹೋಗ್ತೀರಿ. ಮಗು ನಿಮ್ಮನ್ನು ಆಚೆ ತಳ್ಳುತ್ತೆ. ನಿಮ್ಮ ಅಕ್ಕರೆಯನ್ನು ಸಂಪೂರ್ಣ ನಿರ್ಲಕ್ಷಿಸುತ್ತೆ. ಮುಂದಿನದು ಆತಂಕ, ನೋವು, ಸಿಟ್ಟು ಎಲ್ಲ ಒಟ್ಟೊಟ್ಟಿಗೆ ಬರುವ ಸಂದರ್ಭ. ಪಾಪುಗೆ ನನ್ನ ಮೇಲೆ ಪ್ರೀತಿ ಕಡಿಮೆಯಾಗಿದೆ.
ಅದಕ್ಕೀಗ ನಾನು ಬೇಡ ಅಂತ ಮನಸ್ಸು ಕುಸಿಯುತ್ತೆ. ಮೊದ ಮೊದಲು ಅಷ್ಟು ಪ್ರೀತಿ ತೋರಿಸುತ್ತಿದ್ದ ಗಂಡನಿಗೂ ಈಗೀಗ ನನ್ನ ಬಗ್ಗೆ ನಿರ್ಲಕ್ಷ್ಯ. ಈಗ ಪಾಪೂಗೂ ನಾನು ಬೇಡ. ಯಾರಿಗೂ ಬೇಡ ಅಂದರೆ ಯಾಕೆ ಬದುಕಿರ್ಬೇಂಕು ಅಂತ ಒಂದು ಕಡೆ ಹತಾಶಗೊಳ್ಳೋ ಮನಸ್ಸು. ಅಷ್ಟರಲ್ಲೇ ಸಿಟ್ಟು ಒತ್ತರಿಸಿ ಬಂದು, .. ಹೋಗಿ ಹೋಗಿ ಇಂಥವರನ್ನು ಹಚ್ಕೊಳ್ತೀನಲ್ಲ, ತಾಯಿ ಪ್ರೀತಿಯಿಲ್ಲದ ಎಷ್ಟು ಜನ ಮಕ್ಕಳಿದ್ದಾರೆ, ಅವರಿಗಾದರೂ ಪ್ರೀತಿ ಕೊಟ್ಟರೆ ಒಂದಿಷ್ಟು ಬೆಲೆ ಇರ್ತಿಳತ್ತು.. ಯೋಚನೆ ಮುಂದುವರಿಯುತ್ತೆ, ಕೊನೆಗೆ ನಮಗೆ ನಾವೇ ಸಮಾಧಾನ ಮಾಡ್ಕೊಳ್ತೀವಿ. ಈಗೊಂದು ಪ್ರಶ್ನೆ – ಇಷ್ಟೆಲ್ಲ ಆ್ಯಂಗಲ್ನಲ್ಲಿ ಯೋಚಿಸುವ ನಮ್ಮ ಮನಸ್ಸು ಮಗು ಯಾಕೆ ಹಾಗಾಡ್ತಿದೆ ಅಂತ ಯಾಕೆ ಯೋಚಿಸೋದಿಲ್ಲ. ಮಗುವಿನ ಈ ವರ್ತನೆಗೆ ಕಾರಣ ತಿಳ್ಕೊಂಡರೆ ಇಷ್ಟೆಲ್ಲ ನೋವು ಪಡುವ ಪ್ರಸಂಗವೇ ಬರುತ್ತಿರಲಿಲ್ಲ.
ಮಗುವಿನ ಮನಸ್ಸು ಕೆಟ್ಟಿರಬಹುದು. ಮಕ್ಕಳಿಗೂ ಮನಸು ಹಾಳಾಗೋದು, ಮೂಡ್ ಸ್ವಿಂಗ್ ಆಗೋದೆಲ್ಲ ಇರುತ್ತಾ ಅಂತ ಕೆಲವು ಪೋಷಕರು ಅಚ್ಚರಿಪಡುತ್ತಾರೆ. ಪಾಪು ಏನೋ ಯೋಚಿಸ್ತಿದ್ದರೆ ಇಷ್ಟು ಚಿಕ್ಕ ಮಕ್ಕಳಿಗೆ ಏನಂಥ ಯೋಚನೆ ಅಂತ ಉಡಾಫೆಯ ಮಾತಾಡ್ತಾರೆ. ಆದರೆ ಶಾಲೆಯಲ್ಲಾದ ಯಾವುದೋ ಘಟನೆ ಈಕೆಯಲ್ಲಿ ಕಿರಿಕಿರಿ ಹುಟ್ಟಿಸಿರಬಹುದು. ಆ ಇರಿಟೇಶನ್ ಇನ್ನೂ ಮನಸ್ಸಲ್ಲುಳಿದು ನಿಮ್ಮ ಪ್ರೀತಿಯನ್ನು ಆಸ್ವಾದಿಸುವ ಮೂಡ್ ಇಲ್ಲದಿರಬಹುದು.

ಫ್ರೆಶ್ ನ್ಯೂಸ್

Latest Posts

Featured Videos