ಜವಹರಲಾಲ್ ನೆಹರು ಬಾಲ ಭವನದ ದುರವಸ್ಥೆ

ಜವಹರಲಾಲ್ ನೆಹರು ಬಾಲ ಭವನದ ದುರವಸ್ಥೆ

ಬೆಂಗಳೂರು,ಜು. 19: ಚಾಚಾ ನೆಹರುರವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಜವಾಹರ್ಲಾಲ್ ಬಾಲಭವನ ಮಕ್ಕಳ ಮನೋವಿಕಾಸಕ್ಕೆ ಸೃಜನಾತ್ಮಕ ಕಲಾ ಬೆಳವಣಿಗೆಗೆ ಅನುಕೂಲವಾಗುವಂತೆ ಪ್ರಾರಂಭಿಸಲಾಗಿದೆ.  1967 ರಿಂದ ಪ್ರಾರಂಭವಾದ ಈ ಭವನವು ಕಬ್ಬನ್ ಉದ್ಯಾನವನದ ಪಕ್ಕದಲ್ಲಿ ಸ್ಥಾಪಿತವಾಗಿದೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ.

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲೂಕು ಬಾಲ ಭಾವನೆಗಳಿಂದ ಆಯಾಯ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಅಧ್ಯಕ್ಷರಾಗಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರುಗಳು ಇಲ್ಲಿ ಕಾರ್ಯವನ್ನು ನಿರ್ವಹಿಸುತ್ತಾರೆ. ಬಾಲ ಭವನದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಾರೆ.

ಮಕ್ಕಳಲ್ಲಿ ಒದಗಿರುವ ಸೃಜನಾತ್ಮಕ ಪ್ರತಿಭೆಯನ್ನು ಹೊರತರುವ ನಿಟ್ಟಿನಲ್ಲಿ ಜವಹರಲಾಲ್ ಬಾಲ ಭವನಕ್ಕೆ ಪ್ರತಿ ದಿನ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತಾರೆ. ಇದರಿಂದ ಅಪಾರ ಸಂಖ್ಯೆಯಲ್ಲಿ ವಿವಿಧ ಶಾಲೆಯ ಮಕ್ಕಳು ಭೇಟಿ ನೀಡುತ್ತಲೇ ಇರುತ್ತಾರೆ.

ಮಕ್ಕಳಲ್ಲಿ ಒದಗಿರುವ ಸೃಜನಾತ್ಮಕ ಪ್ರತಿಭೆಯನ್ನು ಹೊರತರುವ ನಿಟ್ಟಿನಲ್ಲಿ  ಶಾಲಾ ವಿದ್ಯಾರ್ಥಿಗಳಿಗೆ ಸಮಗ್ರ ಯೋಜನೆ, ಮಕ್ಕಳ ಗ್ರಂಥಾಲಯ ಆಟಿಕೆ ಸೌಲಭ್ಯ ಬಾಲ ವೇದಿಕೆ, ವಿಜಯ ರಂಗಮಂದಿರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.

ಇವುಗಳನ್ನು ರಕ್ಷಿಸುವ ಕಾಪಾಡುವ ಹೊಣೆಗಾರಿಕೆ, ಅಲ್ಲಿನ ಆಡಳಿತ ವರ್ಗಕ್ಕೆ ಸಂಭಂದ ಪಟ್ಟಿದ್ದು, ಐತಿಹಾಸಿಕ ಪ್ರಸಿದ್ಧಿ ಪಡೆದಿರುವ ಬಾಲ ಭವನದ ಸುತ್ತ ಮುತ್ತ ಕಿಂಚಿತ್ತು ಕಾಳಜಿ ಇಲ್ಲದಂತಾಗಿದೆ.

 ಕಸದ ತೊಟ್ಟಿ

ಯಾಕೆಂದರೆ ಬಾಲ ಭವನದ ಸುತ್ತ ಮುತ್ತ ಕಸದ ತೊಟ್ಟಿ ನಿರ್ಮಾಣವಾಗಿದೆ. ಹರಿದು ಬಿದ್ದಿರುವ ವಿದ್ಯುತ್ ತಂತಿಗಳು, ಗಲೀಜು ತುಂಬಿದ ನೀರಿನ ತೊಟ್ಟಿಗಳು. ಮಕ್ಕಳಿಗೆ ಮುಕ್ತವಾಗಿ ಆಟ ಆಡುತ್ತ  ಕಲಿಯುವ ಪದ್ಧತಿಯನ್ನು  ಒದಗಿಸೋದಿಕ್ಕೆ ಇರುವಂತ ಆಟಿಕೆಗಳು ಮುರಿದು ಬಿದ್ದಿದೆ.

ಅಲ್ಲದೆ ಮಕ್ಕಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ತಿರುಗಾಡಲು ಇರುವ  ಮರದ ಮೆಟ್ಟಿಲುಗಳು ಮುರಿದು ಬಿದ್ದಿದೆ. ಮಕ್ಕಳು ಆಟವಾಡುವ ಸ್ಥಳದ ಪಕ್ಕದಲ್ಲೆ ಕಸದ ರಾಶಿ, ಕ್ಯಾಂಟೀನದ ಪಕ್ಕದಲ್ಲಿ ಅಂಚಿನ ಚೂರುಗಳು, ಪಾಚಿ ಕಟ್ಟಿದ ನೀರಿನ ಕೊಳಗಲು  ಇದರ ಬಗ್ಗೆ ಆಡಳಿತ ವರ್ಗ ಯಾವುದೆ ಕ್ರಮ ಕೈಗೊಳ್ಳದೆ ಸುಮ್ಮನೆ ಜಾಣಮೌನ ವಹಿಸಿರುವುದು ಬೇಸರದ ಸಂಗತಿಯೇ ಸರಿ.

ಮೇಲೆಲ್ಲ ಅಳುಕು ಬಳುಕು ಒಳಗೆ ನೋಡಿದರೆ ಹುಳುಕು

ಮೇಲೆಲ್ಲ ಅಳುಕು ಬಳುಕು ಒಳಗೆ ನೋಡಿದರೆ ಹುಳುಕು ಎನ್ನುವ ಹಾಗೆ ಹೊರಗೆ ನೋಡಲು ಬಲು ಸುಂದವಾಗಿ ಕಾಣುವ ಬಾಲ ಭವನದ ಒಳಗೆ  ಇಷ್ಟೇಲ್ಲ ರೀತಿಯ ಸಮಸ್ಯೆಗಳಿರುವುದು ಮುಜುಗರದ ಸಂಗತಿ. ಈಗಾಲಾದರು ಅಲ್ಲಿನ ಆಡಳಿತ ವರ್ಗ ಎಚ್ಚೆತ್ತು ಬಾಲ ಭವನದ ಅಭಿವೃದ್ಧಿ ಶ್ರಮಿಸಲಿ ಎನ್ನುವುದೆ ನಮ್ಮ ಆಶಯ .

 

ಫ್ರೆಶ್ ನ್ಯೂಸ್

Latest Posts

Featured Videos