ಅಯೋಧ್ಯೆಗೆ ಹೋಗುವ ಭಕ್ತರಿಗೆ ಬಿಜೆಪಿ ನೆರವು!

ಅಯೋಧ್ಯೆಗೆ ಹೋಗುವ ಭಕ್ತರಿಗೆ ಬಿಜೆಪಿ ನೆರವು!

ಬೆಂಗಳೂರು: ಲೋಕಸಭಾ ಚುನಾವಣೆ ಹತ್ರ ಬರುತ್ತಿದ್ದಂತೆ, ರಾಮ ಭಕ್ತರಿಗೆ ಬಿಜೆಪಿಯಿಂದ ಆಯೋಧ್ಯೆ ಪ್ರವಾಸ ಭಾಗ್ಯ ಕಲ್ಪಿಸುತ್ತಿದ್ದಾರೆ. ರಾಮ ಮಂದಿರ ಉದ್ಘಾಟನೆ ಬಳಿಕ ಬಿಜೆಪಿಯಿಂದ ಚುನಾವಣಾ ದಾಳ ಬೀಸುತ್ತಿದ್ದಾರೆ.ರಾಮಭಕ್ತರ ಮೇಲೆ ರಾಮಬಾಣ ಪ್ರಯೋಗಕ್ಕೆ ಬಿಜೆಪಿ ಭರ್ಜರಿ ಪ್ಲಾನ್ ನಡೆಸುತ್ತಿದೆ. ರಾಮ ಮಂದಿರ ದರ್ಶನಕ್ಕೆ ಹೋಗುವ ರಾಮಭಕ್ತರ  ಪ್ರವಾಸಕ್ಕೆ ನೆರವು ನೀಡಲಿದ್ದಾರೆ. ರಾಮ ಭಕ್ತರ ಒಲವು ಗಳಿಸಲು ಈ ಮೂಲಕ ಚುನಾವಣಾ ಲಾಭದತ್ತ ಬಿಜೆಪಿ ಕಣ್ಣುಆಕಿದೆ.  ಅಧಿಕಾರದಲ್ಲಿದ್ದಂತಹ ಸಂದರ್ಭದಲ್ಲಿ ಕಾಶಿ ವಿಶ್ವನಾಥನ ದರ್ಶನಕ್ಕೆ ಸಬ್ಸಿಡಿ ಕೊಡ್ತೀವಿ ಅಂತ ಹೇಳಿದ್ದರು. ಕೆಲವು ಕೂಡ ಚುನಾವಣೆ ಗಿಮಿಕ್ ಇರಬಹುದು. ಜನವರಿ ತಿಂಗಳಾಂತ್ಯಕ್ಕೆ ಅಯೋಧ್ಯಕ್ಕೆ ಹೋಗುವವರಿಗೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತದೆ ಎಂದು  ಪಕ್ಷದ ನಾಯಕರಿಗೆ, ಪ್ರಮುಖರಿಗೆ, ಕಾರ್ಯಕರ್ತರಿಗೆ, ಹೈಕಮಾಂಡ್ ಸೂಚನೆ ನೀಡಿದ್ದಾರೆ. ಅಯೋಧ್ಯಕ್ಕೆ ಹೋಗುವ ಭಕ್ತರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos