ಅಯೋಧ್ಯಾ ಮೇಲೆ ಪಾಕ್ ಸ್ಕೇಚ್ !

ಅಯೋಧ್ಯಾ ಮೇಲೆ ಪಾಕ್ ಸ್ಕೇಚ್ !

ನವದೆಹಲಿ, ನ. 5 : ಬಾಬ್ರಿ ಮಸೀದಿ-ರಾಮ ಮಂದಿರ ಭೂ ವಿವಾದಕ್ಕೆ ಪ್ರಕಟವಾಗಲು ದಿನಗಣನೆ ಆರಂಭವಾಗಿರುವ ಹಿನ್ನಲೆ ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ದಾಳಿ ನಡೆಸಲು ಸ್ಕೇಚ್ ಹಾಕಿವೆ.
ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಗಳು ಉತ್ತರಪ್ರದೇಶವನ್ನು ಗುರಿಯಾಗಿರಿಸಿಕೊಂಡಿರುವ ಹಿನ್ನಲೆ ನೇಪಾಳದ ಮೂಲಕ ಉತ್ತರಪ್ರದೇಶಕ್ಕೆ ಏಳು ಉಗ್ರರು ನುಸುಳಿರುವುದಾಗಿ ತಿಳಿಸಿದೆ. ಇವರೆಲ್ಲರೂ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗೆ ಸೇರಿರುವುದಾಗಿ ಗುಪ್ತಚರ ಮೂಲ ತಿಳಿಸಿದೆ.
ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಮೊಹಮ್ಮದ್ ಯಾಕೂಬ್, ಅಬು ಹಮ್ಜಾ, ಮೊಹಮ್ಮದ್ ಷಾಬಾಝ್, ನಿಸಾರ್ ಅಹ್ಮದ್ ಮತ್ತು ಮೊಹಮ್ಮದ್ ಖ್ವಾಮಿ ಚೌಧರಿ ಉತ್ತರಪ್ರದೇಶಕ್ಕೆ ನುಸುಳಿರುವ ಏಳು ಉಗ್ರರು ಸದ್ಯ ಗೋರಖ್ ಪುರ್, ಫೈಝಾಬಾದ್ ಮತ್ತು ಅಯೋಧ್ಯಾ ನಗರದಲ್ಲಿ ಅಡಗಿದ್ದಾರೆನ್ನಲಾಗಿದೆ. ಐವರು ಉಗ್ರರನ್ನು ಗುರುತಿಸಲಾಗಿದೆ ಎಂದು ಗುರುತಿಸಿರುವುದಾಗಿ ಗುಪ್ತಚರ ಮೂಲಗಳು ಹೇಳಿವೆ. ಮುಂಜಾಗ್ರತಾ ಕ್ರಮವಾಗಿ ಎಲ್ಲ ರೀತಿಯ ಭದ್ರತೆಯನ್ನು ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos