ಆಯತಪ್ಪಿ ಕಾಲುವೆಗೆ ಬಿದ್ದ ವಾಹನ!

ಆಯತಪ್ಪಿ ಕಾಲುವೆಗೆ ಬಿದ್ದ ವಾಹನ!

ಲಕ್ನೋ, ಜೂ. 20: ಇಂದು ಮುಂಜಾನೆ ಲಕ್ನೋದ ನಾಗ್ರಾಮ್ ನಲ್ಲಿ ಸುಮಾರು 29 ಜನರನ್ನು ಹೊತ್ತ ಸಾಗಿಸುತ್ತಿದ್ದ ವಾಹನವೊಂದು ಆಯತಪ್ಪಿ ನೀರಿಗೆ ಬಿದ್ದ ಪರಿಣಾಮ ಸುಮಾರು 7 ಮಕ್ಕಳು ಕಾಣೆಯಾಗಿರುವ ಘಟನೆ ನಡೆದಿದೆ.

ವಾಹನವು ಕಾಲುವೆ ಸಮೀಪ ಹೋಗುತ್ತಿದ್ದಾಗ ಆಯತಪ್ಪಿ ನೀರಿಗೆ ಬಿದ್ದಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಈಗಾಗಲೇ ಸುಮಾರು 22 ಜನರನ್ನು ರಕ್ಷಿಸಲಾಗಿದೆ. ಆದರೆ 7 ಮಕ್ಕಳು ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ಎಸ್ ಎಸ್ ಪಿ ಮತ್ತು ಎನ್ ಡಿಆರ್ ಎಫ್ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ.

 

ಫ್ರೆಶ್ ನ್ಯೂಸ್

Latest Posts

Featured Videos