ಪಟಾಕಿ ರಹಿತ ದೀಪಾವಳಿ ಶಾಲಾ ಮಕ್ಕಳಿಂದ ಜಾಗೃತಿ

ಪಟಾಕಿ ರಹಿತ ದೀಪಾವಳಿ ಶಾಲಾ ಮಕ್ಕಳಿಂದ ಜಾಗೃತಿ

ಕೆ.ಆರ್.ಪುರ, ಅ. 19: ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಪಟಾಕಿಯಿಂದಾಗುವ ಅನಾಹುತ ಮತ್ತು ಪರಿಸರ ಮಾಲಿನ್ಯದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪುಟ್ಟಮಕ್ಕಳಿಂದ ಅರಿವು ಮೂಡಿಸುವ ಕೆಲಸ ಮಾಡಲಾಗಿದೆ ಎಂದು ಶಾಲೆಯ ಮುಖ್ಯಸ್ಥೆ ಲೀನಾ ವರನ್ದಾನಿ ತಿಳಿಸಿದರು.

ಪ್ರತಿಯೊಬ್ಬರು ಪರಿಸರ ಸ್ನೇಹಿ ದೀಪಾವಳಿ ಆಚರಿಸುವಂತೆ  ಲಿಟಲ್ ಎಲಿ  ಶಾಲೆಯ  ಮಕ್ಕಳು ನಗರದ ಮಾರತಹಳ್ಳಿ ಸಮೀಪದ ಇಬ್ಬಲೂರು ಸಿಲ್ಕ್ ಬೋರ್ಡ್ ರಸ್ತೆಯಲ್ಲಿ ನಾಮಫಲಕಗಳನ್ನು ಹಿಡಿದು ಸಾರ್ವಜನಿಕರಿಗೆ ಅರಿವು ಮೂಡಿಸಿ ಪಟಾಕಿಯಿಂದಾಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸಿದರು.

ಪಟಾಕಿ ಶಬ್ದದಿಂದ ಪ್ರಾಣಿಪಕ್ಷಿಗಳು ನರಳುವಂತೆ ಮಾಡಿ, ವಾಯುಮಾಲಿನ್ಯದಿಂದ ಮನುಷ್ಯನಿಗೆ ಅನಾರೋಗ್ಯದಿಂದ ಬಳಲುವಂತೆ ಮಾಡುವುದರಿಂದ ಪಟಾಕಿ ಸಿಡಿಸಿ ಶಬ್ದ ಮತ್ತು ವಾಯು ಮಾಲಿನ್ಯಕ್ಕೆ ಮುಖ್ಯ ಕಾರಣವಾಗಿದೆ ಎಂದರು‌‌.

ಮೌಚ್ಚಂದ ಮಿತ್ರ ಮಾತನಾಡಿ, ಸುಪ್ರೀಂಕೋರ್ಟ್ ದೆಹಲಿಯಲ್ಲಿ ಪಟಾಕಿಯನ್ನು ನಿಷೇಧಿಸಿದೆ. ಅದರಂತೆ ಎಲ್ಲಾ ಸರ್ಕಾರಗಳು ಪಟಾಕಿ ನಿಷೇಧಿಸಬೇಕು ಎಂದು ಮನವಿ ಮಾಡಿದರು.

ಇದೇವೇಳೆ  ವಿದ್ಯಾರ್ಥಿಗಳು ಪಟಾಕಿ ಹೊಡೆಯುವುದಿಲ್ಲವೆಂದು ಪ್ರತಿಜ್ಞೆ ಸ್ವೀಕರಿಸಿದರು ಶಿಕ್ಷಕಿ ಶ್ವೇತಾ ಮಂಜುನಾಥ್ ಅವರು ಮಕ್ಕಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಇದೇ ಸಂದರ್ಭದಲ್ಲಿ ಲಿಟಲ್ ಎಲಿ ಕಸವನಹಳ್ಳಿ, ಸರ್ಜಾಪುರ ವಿಪ್ರೋಗೇಟ್, ಹಾಡೂಸಿದ್ದಪುರ ಕಾರ್ಮಲರಂ ಶಾಖೆಯ ಶಾಲ ಮಕ್ಕಳು, ಶಿಕ್ಷಕರಾದ ಶ್ವೇತಾಮಂಜುನಾಥ್ ರಾವ್, ಪ್ರಿಯಾಂಕ ಶರ್ಮ, ರುಪಾಲಿ, ರಾಕಿ ಹಾಗೂ ಶಾಲಾ ಮಕ್ಕಳು ಅರಿವು ಮೂಡಿಸುವ ಕಾರ್ಯದಲ್ಲಿ ಭಾಗವಹಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos