ಆಟೋ ಪಲ್ಟಿ; 7 ಮಹಿಳೆಯರಿಗೆ ಗಾಯ

ಆಟೋ ಪಲ್ಟಿ; 7 ಮಹಿಳೆಯರಿಗೆ ಗಾಯ

ಮಂಡ್ಯ, ಅ.1 : ಮದ್ಯಪಾನ ಸೇವಿಸಿ ಆಟೋನಲ್ಲಿ ಗಾರ್ಮೆಂಟ್ಸ್ ಗೆ ಮಹಿಳೆಯರನ್ನು ಕರೆ ತರುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಆಟೋ ಮೂರು ಪಲ್ಟಿಯಾಗಿ, 7 ಮಹಿಳೆಯರು ಗಾಯಗೊಂಡಿದ್ದಾರೆ.
ಮಂಡ್ಯ ಹೊರವಲಯದ ಕೋಣನಹಳ್ಳಿಯ ಶೋಭಾ (38), ಜ್ಯೋತಿ (23), ಎಂ.ವಿ.ಅಶ್ವಿನಿ (32), ಭಾಗ್ಯ (30), ಜಯಲಕ್ಷ್ಮಿ (37), ಕೆ.ಪಿ.ಅಶ್ವಿನಿ (20), ಗೌರಮ್ಮ (38) ಗಾಯಗೊಂಡಿದ್ದು, ಎಲ್ಲರಲನ್ನು ಮಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ತಾಲೂಕಿನ ಚೀರನಹಳ್ಳಿಯ ಮುತ್ತುರಾಜ್ ಎಂಬಾತನ ಆಟೋನಲ್ಲಿ ಮಹಿಳೆಯರು ಪ್ರತಿದಿನ ಗೆಜ್ಜಲಗೆರೆ ಗಾರ್ಮೆಂಟ್ಸ್ ಗೆ ತೆರಳುತ್ತಿದ್ದರು. ಇಂದು ಮುತ್ತುರಾಜ್ ಬೆಳಗ್ಗೆಯೇ ಚನ್ನಾಗಿ ಮದ್ಯ ಸೇವಿಸಿ ಆಟೋ ಚಾಲನೆ ಮಾಡಿಕೊಂಡು ಬರುತ್ತಿದ್ದ ನಗರದ ಕಲ್ಲಹಳ್ಳಿ ರೈಲ್ವೆ ಗೇಟ್ ಬಳಿ ನಿಯಂತ್ರಣದ ತಪ್ಪಿದ ಆಟೋ ಮೂರು ಪಲ್ಟಿಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos