ಆಸ್ಟ್ರೇಲಿಯಾ ತಂಡ ಭರ್ಜರಿ ಗೆಲುವು

ಆಸ್ಟ್ರೇಲಿಯಾ ತಂಡ ಭರ್ಜರಿ ಗೆಲುವು

ಬೆಂಗಳೂರು: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ 24ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ನೆದರ್ಲೆಂಡ್ಸ್ ಮುಖಾಮುಖಿಯಾಗಿದೆ. ಬರೋಬ್ಬರಿ 309 ರನ್‌ಗಳ ಗೆಲುವಿನೊಂದಿಗೆ ಐದು ಬಾರಿಯ ಏಕದಿನ ವಿಶ್ವಕಪ್‌ ಚಾಂಪಿಯನ್‌ ಆಸ್ಟ್ರೇಲಿಯಾ ತಂಡ ನೆದರ್ಲೆಂಡ್ಸ್‌ ತಂಡವನ್ನು ಚಚ್ಚಿ ಬಿಸಾಡಿದೆ. ಅರುಣ್‌ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆಸೀಸ್‌ನ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಪ್ರಹಾರದ ಮುಂದೆ ಸಂಪೂರ್ಣವಾಗಿ ಮಂಡಿಯೂರಿದ ನೆದರ್ಲೆಂಡ್ಸ್‌ ತಂಡ ಕೇವಲ 90 ರನ್‌ಗೆ ಆಲೌಟ್‌ ಆಯಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ 44 ಎಸೆತಗಳ 106 ರನ್‌ಗಳ ನೆರವಿನಿಂದ 9 ವಿಕೆಟ್‌ಗೆ 399 ರನ್‌ಗಳ ಬೃಹತ್‌ ಮೊತ್ತ ಪೇರಿಸಿತ್ತು. ಇದು ವಿಶ್ವಕಪ್‌ ಇತಿಹಾಸದಲ್ಲಿಯೇ ತಂಡವೊಂದರ ಅತೀದೊಡ್ಡ ಗೆಲುವು ಎನಿಸಿದೆ. ಅದಲ್ಲದೆ, ರನ್‌ ಅಂತರದಲ್ಲಿ ಏಕದಿನ ಕ್ರಿಕೆಟ್‌ನ 2ನೇ ದೊಡ್ಡ ಗೆಲುವು ಎನಿಸಿದೆ. ಇದೇ ವರ್ಷ ಭಾರತ ತಂಡ ತಿರುವನಂತಪುರದಲ್ಲಿ ಶ್ರೀಲಂಕಾ ತಂಡವನ್ನು 317 ರನ್‌ಗಳಿಂದ ಸೋಲಿಸಿರುವುದು ಏಕದಿನ ಕ್ರಿಕೆಟ್‌ನಲ್ಲಿ ತಂಡವೊಂದರ ಅತೀದೊಡ್ಡ ಗೆಲುವು ಎನಿಸಿದೆ.

ಕಳೆದ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು ಸೋಲಿಸುವ ಮೂಲಕ ವಿಶ್ವಕಪ್‌ನ ಅಚ್ಚರಿಯ ಫಲಿತಾಂಶ ನೀಡಿದ್ದ ನೆದರ್ಲೆಂಡ್ಸ್‌ ತಂಡದಲ್ಲಿ ನಿನ್ನೆಅಂಥ ಆಟ ಕಂಡುಬರಲೇ ಇಲ್ಲ. 400 ರನ್‌ಗಳ ಚೇಸಿಂಗ್‌ ಸಾಹಸದಲ್ಲಿ ನೆದರ್ಲೆಂಡ್ಸ್‌ ತಂಡ 21 ಓವರ್‌ಗಳಲ್ಲಿ ಕೇವಲ 90 ರನ್‌ಗೆ ಆಲೌಟ್‌ ಆಯಿತು.

ಫ್ರೆಶ್ ನ್ಯೂಸ್

Latest Posts

Featured Videos