ಈ ಬಾರಿ ಆಸ್ಟ್ರೇಲಿಯಾ ವಿಶ್ವಕಪ್ ನಮ್ಮದೆ: ಶೇನ್ ವಾರ್ನ್

  • In Sports
  • March 6, 2019
  • 165 Views
ಈ ಬಾರಿ ಆಸ್ಟ್ರೇಲಿಯಾ ವಿಶ್ವಕಪ್ ನಮ್ಮದೆ:  ಶೇನ್ ವಾರ್ನ್

ಸಿಡ್ನಿ, ಮಾ.6, ನ್ಯೂಸ್ ಎಕ್ಸ್ ಪ್ರೆಸ್: ಚೆಂಡು ವಿರೂಪ ಪ್ರಕರಣದಲ್ಲಿ 1 ವರ್ಷ ಕ್ರಿಕೆಟ್ನಿಂದ ನಿಷೇಧಿಸಲ್ಪಟ್ಟಿರುವ ಆಸ್ಟ್ರೇಲಿಯಾದ  ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ತಂಡವನ್ನು ಮತ್ತೆ ಸೇರಿಕೊಳ್ಳಲಿದ್ದಾರೆ. ಇದಕ್ಕಾಗಿ ಈ ಬಾರಿಯ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ತಂಡ ಪ್ರಶಸ್ತಿ ಜಯಿಸಲಿದೆ ಎಂದು ಆಸೀಸ್ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾ ತಂಡದಲ್ಲಿ ಆಕರ್ಷಣೀಯ ಆಟಗಾರನಾಗಿ ಮಿಂಚಿದ್ದ ಸ್ಪಿನ್ ದಿಗ್ಗಜ ಶೇನ್ ಕೂಡ 2003ರಲ್ಲಿ 1 ವರ್ಷ ಕ್ರಿಕೆಟ್ನಿಂದ ನಿಷೇಧಕ್ಕೆ ಒಳಗಾಗಿದ್ದರು. ನಿಷೇಧಿತ ಮೂತ್ರವರ್ಧಕ ಔಷಧಿ ಸೇವಿಸಿ ಸಿಕ್ಕಿಬಿದ್ದಿದ್ದರಿಂದ ವಾರ್ನ್ ಗೆ ನಿಷೇಧ ಶಿಕ್ಷೆ ನೀಡಲಾಗಿತ್ತು.

ಆಸ್ಟ್ರೇಲಿಯಾ ತಂಡವನ್ನು ಮರಳಿ ಸೇರಿಕೊಳ್ಳಲಿರುವ 2 ಆಟಗಾರರು ಕ್ರೀಡಾರಂಗದಲ್ಲಿ ಮತ್ತೆ ಮಿಂಚಿನಂತೆ ಮಿಂಚಲಿದ್ದಾರೆ ಎನ್ನುತ್ತ ವಾರ್ನ್, ‘ಕೊಂಚ ಕಾಲ ಮೈದಾನದಿಂದ ದೂರ ಉಳಿದಿದ್ದವರು ಮತ್ತೆ ಮೈದಾನಕ್ಕಿಳಿಯುವಾಗ ಅವರಲ್ಲಿ ಹೊಸತನವಿರುತ್ತದೆ. ಕ್ರಿಕೆಟ್ ಬಗ್ಗೆ ಹಸಿವಿರುತ್ತದೆ. ಅಲ್ಲದೆ ಕ್ರಿಕೆಟ್ ಎಷ್ಟರ ಮಟ್ಟಿಗೆ ಮಹತ್ವದ್ದು ಎಂಬುದು ಅವರಿಗಾಗ ಇಗಾಗಲೆ ಅರಿವಾಗಿರುತ್ತದೆ. ಹೀಗಾಗಿ ಈ ಬಾರಿ ಆಸ್ಟ್ರೇಲಿಯಾ ವಿಶ್ವಕಪ್ ಗೆಲ್ಲಲಿದೆ. ಎಂದು ವಾರ್ನ್ ವಿವರಿಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಆತಿಥೇಯ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಚೆಂಡು ವಿರೂಪದಲ್ಲಿ ಪಾಲ್ಗೊಂಡ ಆರೋಪದಲ್ಲಿ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಅವರನ್ನು ಕಳೆದ ಮಾ. 28ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಐಸಿಸಿ ನಿಷೇಧಕ್ಕ ಒಳಪಡಿಸಲಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos