ಬೆಂಗಳೂರು, ನ. 16 : ಟಿಕ್ ಟಾಕ್ನಲ್ಲಿ ಪರಿಚಯವಾದ ಮಹಿಳೆಯೊಬ್ಬಳು ಮದುವೆಯಾಗುತ್ತೇನೆ ಎಂದು ನಂಬಿಸಿ ವ್ಯಕ್ತಿಯೊಬ್ಬನಿಂದ 4 ಲಕ್ಷ ರೂ. ಪಂಗನಾಮ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ನಿವಾಸಿ ವಿಜಯಲಕ್ಷ್ಮಿ ಹಣ ಪೀಕಿದ ಮಹಿಳೆ. ದೊಮ್ಮಲೂರು ನಿವಾಸಿ ಶಿವಕುಮಾರ್ ವಂಚನೆಗೆ ಒಳಗಾದ ವ್ಯಕ್ತಿ. ಮತ್ತೋರ್ವ ಆರೋಪಿ ಮಧು ಕೊಲ್ಯಾನ್, ಶಿವಕುಮಾರ್ ಗೆ ಕೊಲೆ ಬೆದರಿಕೆ ಹಾಕಿದ ಶಿವಕುಮಾರ್ ಟಿಕ್ ಟಾಕ್ನಲ್ಲಿ ವಿಜಯಲಕ್ಷ್ಮಿಯ ಸ್ನೇಹ, ಪ್ರೀತಿಗೆ ತಿರುಗಿ ಶಿವಕುಮಾರ್ ಹಾಗೂ ವಿಜಯಲಕ್ಷ್ಮಿ ಪರಸ್ಪರ ಒಪ್ಪಿ ಒಂದೇ ಮನೆಯಲ್ಲಿ ವಾಸವಿದ್ದರು.ನಿನ್ನನ್ನು ಮದುವೆಯಾಗುತ್ತೇನೆ ಎಂದು ವಿಜಯಲಕ್ಷ್ಮಿ ಶಿವಕುಮಾರ್ನನ್ನು ನಂಬಿಸಿದ್ದಳು. ಜೊತೆಗೆ ಆತನಿಂದ ಶಾಪಿಂಗ್, ಬಾಡಿಗೆ ಸೇರಿದಂತೆ ಇತರೆ ಖರ್ಚಿಗೆ ಅಂತ 4 ಲಕ್ಷ ರೂ. ಪಡೆದಿದ್ದಾಳೆ.