ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ: AP, FAM ಉಲ್ಲೇಖ..!

  • In Crime
  • April 5, 2019
  • 154 Views
ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ: AP, FAM ಉಲ್ಲೇಖ..!

ನವದೆಹಲಿ, ಏ. 5, ನ್ಯೂಸ್ ಎಕ್ಸ್ ಪ್ರೆಸ್: ಬಹುಕೋಟಿ ರೂ.ಗಳ ಅಗಸ್ಟಾ ವೆಸ್ಟ್ ಲ್ಯಾಂಡ್-ವಿವಿಐಪಿ ಹೆಲಿಕ್ಯಾಪ್ಟರ್ ಹಗರಣದ ಆರೋಪಿ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ ಡೈರಿಯಲ್ಲಿ ಬರೆದುಕೊಂಡಿದ್ದ ಎಪಿ ಎಂದರೆ ಅಹಮದ ಪಟೇಲ ಎಂದು ಗುರುತಿಸಿದ್ದಾಗಿ ತಿಳಿದುಬಂದಿದೆ. ನಿನ್ನೆ ಜಾರಿ ನಿರ್ದೇಶನಾಲಯ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಪೂರಕ ಆರೋಪ ಪಟ್ಟಿಯಲ್ಲಿ ಈ ಕುರಿತು ರಹಸ್ಯ ಬಹಿರಂಗವಾಗಿದೆ. ಈ ಒಪ್ಪಂದ ಜಾರಿ ಮಾಡುವ ವೇಳೆ ರಕ್ಷಣಾ ಅಧಿಕಾರಿಗಳು, ಮಧ್ಯವರ್ತಿಗಳು, ಆಡಳಿತಾಧಿಕಾರಿಗಳು, ಆಡಳಿತ ಪಕ್ಷದ ಪ್ರಮುಖ ನಾಯಕರಿಗೆ ಲಂಚದ ಪಾಲನ್ನು ನೀಡಲಾಗಿತ್ತು ಎಂದು ಅಕ್ರಮ ಹಣ ವರ್ಗಾವಣೆ ನಿಷೇಧ ಕಾಯ್ದೆ (ಪಿಎಂಎಲ್‍ಎ) ಅಡಿಯಲ್ಲಿ ಇಡಿ ಸಲ್ಲಿಸಿದ ಚಾರ್ಜ್ ಶೀಟ್‍ನಲ್ಲಿ ವಿವರಿಸಿದೆ. ಮೈಕೆಲ್ ವಿಚಾರಣೆ ವೇಳೆ ಎಪಿ ಹಾಗೂ ಎಫ್‍ಎಎಂ ಎಂಬ ಕೋಡ್‍ಗಳ ವಿವರ ನೀಡಿದ್ದು ಎಪಿ ಎಂದರೆ ಅಹ್ಮದ್ ಪಟೇಲ್ ಹಾಗೂ ಎಫ್‍ಎಎಂ ಎಂದರೆ ಅವರ ಕುಟುಂಬ ಎಂದು ವಿವರಿಸಿರುವುದಾಗಿ ಆರೋಪ ಪಟ್ಟಿಯಲ್ಲಿ ಹೇಳಿದೆ.

ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಮೇಲೆ ಕೆಲ ಕಾಂಗ್ರೆಸ್ ಪ್ರಭಾವಿ ನಾಯಕರು ಒತ್ತಡ ಹೇರಿದ್ದರು ಎನ್ನುವುದನ್ನು ಸಹ ಮೈಕಲ್ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ. ಎಫ್‍ಎಎಂ ಎಂದರೆ ಕುಟುಂಬ – ಕಾಂಗ್ರೆಸ್, ಗಾಂಧಿ ಕುಟುಂಬ ಎಂದು ಆತ ವಿವರಿಸಿದ್ದಾನೆ. ಒಟ್ಟು 3ಕೋಟಿ ಯುರೋಗಳ ಲಂಚ ಲಂಚದ ಹಣ ಪಾವತಿಸಿರುವ ವಿವರಗಳನ್ನು ಡೈರಿಯಲ್ಲಿ ಬರೆಯಲಾಗಿದೆ ಎಂದಿ ಕೋರ್ಟ್ ಗೆ ಸಲ್ಲಿಸಿದ ಚಾರ್ಜ್ ಶೀರ್ಟ್‍ನಲ್ಲಿ ವಿವರಿಸಲಾಗಿದೆ. ಇಡಿ ನಿನ್ನೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ 52 ಮುಖ್ಯ ಪುಟಗಳನ್ನೂ ಸೇರಿ 3,000-ಪುಟಗಳಿರುವ ಪೂರಕ ಆರೋಪಪಟ್‍ಟಿಯನ್ನು ಸಲ್ಲಿಸಿದ್ದು ಇದರಲ್ಲಿ ಮೈಕಲ್ ಹಾಗೂ ಅವನ ಸ್ನೇಹಿತ ಡೇವಿಡ್ ಸೈಮ್ಸ್ ಹೆಸರನ್ನು ಸಹ ಉಲ್ಲೇಖಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos