ಅಕ್ರಮ ಆಸ್ತಿ ಕಬಳಿಕೆಗೆ ಯತ್ನ

ಅಕ್ರಮ ಆಸ್ತಿ ಕಬಳಿಕೆಗೆ ಯತ್ನ

ಚಿಕ್ಕನಾಯಕನಹಳ್ಳಿ: ಬಗರ್‌ಹುಕುಂ ಸಾಗುವಳಿ ಮಾಡಿಕೊಂಡು ಬಂದಿದ್ದ ಬಡ ರೈತರ ಜಮೀನಿಗೆ ನನ್ನದೆಂದು ಬಲಿಷ್ಟ ರೈತನೊಬ್ಬ ಜೆಸಿಬಿ ಬಳಸಿ ಮೂರು ಮಂದಿ ರೈತರು ಬೆಳೆಸಿದ್ದ ಬೆಳೆಯನ್ನು ನಾಶಪಡಿಸಿದ ಘಟನೆ ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಅಜ್ಜೇನಹಳ್ಳಿ ಬಳಿ ನಡೆದಿದೆ.
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಅಜ್ಜೇನಹಳ್ಳಿ ಸಾಸಲು ನಡುವೆ ಇರುವ ಜಮೀನಿನಲ್ಲಿ ಕಳೆದ ೩೫-೪೦ವರ್ಷದಿಂದ ಬಗರ್‌ಹುಕುಂ ಜಮೀನನ್ನು ಸಾಗುವಳಿ ಮಾಡಿಕೊಂಡು ಬಂದಿದ್ದ ರೈತರಾದ ಕಲ್ಲಪ್ಪನವರ ಮಗ ಪುಟ್ಟಯ್ಯ, ಶರತ್ ಹಾಗೂ ಭಜಂತ್ರಿ ವರ್ಗಕ್ಕೆ ಸೇರಿದ ಶಶಿಕಲಾ ಎಂಬ ಮೂವರ ಜಮೀನನ್ನು ಕಬಳಿಸುವ ಉದ್ದೇಶದಿಂದ ಎ. ಎಂ. ಲಿಂಗರಾಜು ಎಂಬಾತ ಜೆಸಿಬಿ ಮೂಲಕ ಬೆಳೆದು ನಿಂತ ಹುರುಳಿ, ರಾಗಿ ಬೆಳೆಯನ್ನು ನಾಶ ಮಾಡಿದ್ದಾನೆ. ಇದರ ಜೊತೆಗೆ ತನ್ನದಲ್ಲದ ಬೇರೆ ಸರ್ವೆ ನಂಬರ್‌ಗಳಿಗೆ ಸೇರಿದ ಬದುಗಳನ್ನು ಸಹ ದೌರ್ಜನ್ಯದಿಂದ ಜೆಸಿಬಿ ಬಳಸಿ ಒತ್ತುವರಿ ಮಾಡಿದ್ದಾನೆ. ನಾನು ಐದು ಎಕರೆಗೆ ಟಿಟಿ ಕಟ್ಟಿದ್ದೇನೆ ಎಂದು ಮನಸಿಗೆ ಬಂದ ಕಡೆ ಹಳೆಯ ಬಾಂದ್ ಕಲ್ಲುಗಳನ್ನು ಕಿತ್ತು ಅವನಿಗೆ ಬೇಕಾದ ಕಡೆ ನೆಟ್ಟಿದ್ದಾನೆ.
ಇದೇ ವಿಚಾರವಾಗಿ ಈತನ ಮೇಲೆ ಈ ಹಿಂದೆ ಈಕೆ ಠಾಣೆಯಲ್ಲಿ ದೂರು ದಾಖಲಾಗಿ ಈತನು ಪೊಲೀಸ್ ಸಮ್ಮುಖದಲ್ಲಿ ಕ್ಷಮಾಪಣೆಯ ಮುಚ್ಚಳಿಕೆ ಬರೆದು ಕೊಟ್ಟಿದ್ದನೆನ್ನಲಾಗಿದೆ. ಈತನಿಗೆ ಕೇವಲ ೨೦ ಗುಂಟೆ ಬಗರ್‌ಹುಕುಂ ಜಮೀನು ಮಂಜೂರಾಗಿದ್ದು ಇದೇ ನೆಪ ಇಟ್ಟುಕೊಂಡು ಹೆಚ್ಚು ಜಮೀನು ಕಬಳಿಸುವ ಉದ್ದೇಶದಿಂದ ಏಕಾಏಕಿ ಜೆಸಿಬಿಯಿಂದ ಬೆಳೆಗಳನ್ನು ಹಾನಿಮಾಡಿದ್ದಾನೆ.

ಫ್ರೆಶ್ ನ್ಯೂಸ್

Latest Posts

Featured Videos