ಅತ್ಯಾಚಾರಕ್ಕೆ ಯತ್ನ

ಅತ್ಯಾಚಾರಕ್ಕೆ ಯತ್ನ

ಹುಬ್ಬಳ್ಳಿ, ಜ. 5 : ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ನಾಪತ್ತೆಯಾಗಿದ್ದ ಆರೋಪಿಯನ್ನು ಹುಬ್ಬಳ್ಳಿಯ ಅಣ್ಣಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಿದ್ದಪ್ಪ(30) ಬಂಧಿತ ಆರೋಪಿಯಾಗಿದ್ದಾನೆ. ಕಳೆದ ವರ್ಷ ನವೆಂಬರ್ 3 ರಂದು ರಾತ್ರಿ ಮದ್ಯ ಸೇವಿಸಿ ಮಹಿಳೆಯ ಮನೆಗೆ ನುಗ್ಗಿದ ಸಿದ್ದಪ್ಪ ಆಕೆಯ ಬಾಯಿಗೆ ಬಟ್ಟೆ ಕಟ್ಟಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಗಾಬರಿಯಾದ ಮಹಿಳೆ ಆತನನ್ನು ತಳ್ಳಿ ಬಾಯಿಗೆ ಕಟ್ಟಿದ ಬಟ್ಟೆ ಬಿಚ್ಚಿ ಜೋರಾಗಿ ಕೂಗಾಡಿದ್ದಾರೆ. ವೇಳೆ ಸ್ಥಳೀಯರು ಧಾವಿಸಿ ಬಂದು ಆರೋಪಿಯನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಲು ಮುಂದಾಗಿದ್ದಾರೆ. ಮಾರ್ಗಮಧ್ಯೆ ಸ್ಥಳೀಯರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಸಿದ್ದಪ್ಪ ತಲೆಮರೆಸಿಕೊಂಡಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಅಣ್ಣಿಗೇರಿ ಠಾಣೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos