ಉಕ್ಕಾ ಸೆಂಟರ್ ಮೇಲೆ ದಾಳಿ

ಉಕ್ಕಾ ಸೆಂಟರ್ ಮೇಲೆ ದಾಳಿ

ಬೆಂಗಳೂರು, ಜ. 16: ಅಕ್ರಮವಾಗಿ ಉಕ್ಕಾ ಸಾಮಗ್ರಿ ಹಾಗೂ ಮತ್ತುಭರಿಸುವ ಗಾಂಜಾ ಸೇರಿದಂತೆ ಇತರ ಹೊಗೆಸೊಪ್ಪಿನ ತಂಬಾಕು ಪದಾರ್ಥಗಳೊಂದಿಗೆ ಅವುಗಳನ್ನು ಸೇವಿಸುವ ಉಕ್ಕಾ ಪರಿಕರಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಿಢೀರ್ ದಾಳಿ ಮಾಡಿ ಉಕ್ಕಾ ಸೇವನೆಗೆ ಬಳಸುತ್ತಿದ್ದ ಪರಿಕರಗಳನ್ನು ವಶಕ್ಕೆ ಪಡೆದು ಅಂಗಡಿ ಮಾಲೀಕರಿಗೆ ದಂಡ ವಿಧಿಸಲಾಗಿದೆ.

ಇಂದು ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ರಾಯಲ್ ಮೀನಾಕ್ಷಿ ಹತ್ತಿರದಲ್ಲಿರುವ ಸರ್ವಿಸ್ ರಸ್ತೆಯಲ್ಲಿರುವ ಉಕ್ಕಾ ಸೆಂಟರ್ ಮೇಲೆ ಬೊಮ್ಮನಹಳ್ಳಿ ಬಿಬಿಎಂಪಿ ವಲಯದ ಜಂಟಿ ಆಯುಕ್ತರಾದ ರಾಮಕೃಷ್ಣ ನೇತೃತ್ವದಲ್ಲಿ ಗುರುವಾರ ದಿಡೀರ್ ದಾಳಿ ನಡೆಸಿದ್ದಾರೆ.

ದಾಳಿ ಸಂರ್ಭದಲ್ಲಿ ಸುಮಾರು 20ಕ್ಕೂ ಹೆಚ್ಚು ಉಕ್ಕಾ ಯಂತ್ರಗಳನ್ನು ವಶಪಡಿಸಿಕೊಂಡು ತಂಬಾಕು ಹಾಗೂ ಗಾಂಜಾ ಸೇರಿದಂತೆ ಮತ್ತುಬರುವಂತಹ ಪ್ರದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಕ್ಕಾ ಸೆಂಟರ್‌ನ್ನು ಜಪ್ತಿ ಮಾಡಿರುವ ಪಾಲಿಕೆ ಜಂಟಿ ಆಯುಕ್ತ ರಾಮಕೃಷ್ಣ ಅವರು ಸುಮಾರು 20 ಲಕ್ಷ ದಂಡ ವಿಧಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos