ಗೋಕರ್ಣದಲ್ಲಿ ಎಟಿಎಂಗಳು ಖಾಲಿ

ಗೋಕರ್ಣದಲ್ಲಿ ಎಟಿಎಂಗಳು ಖಾಲಿ

ಕಾರವಾರ, ನ. 25 : ರಜೆ ಬಂತು ಎಂದರೆ ಉತ್ತರ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ಕ್ಷೇತ್ರಕ್ಕೆ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.
ಬಹುತೇಕ ಪ್ರವಾಸಿಗರು ಹಣಕಾಸಿನ ವ್ಯವಹಾರವನ್ನು ಆನ್ಲೈನ್ಗಿಂತ ಹೆಚ್ಚು ಎಟಿಎಂಗಳನ್ನು ಬಳಸುತ್ತಾರೆ. ಆದರೆ ಇಂತಹ ಮುಖ್ಯ ದಿನಗಳಲ್ಲಿ ಎಟಿಎಂ ಕೇಂದ್ರಗಳು ಹಣವಿಲ್ಲದೆ ಮುಚ್ಚುತ್ತಿದ್ದು, ಪ್ರವಾಸಿಗರು ಪರದಾಡುವಂತಾಗಿದೆ.
ನಾಲ್ಕು ದಿನದಿಂದ ಇಂದಿನವರೆಗೂ ಗೋಕರ್ಣ ಭಾಗದಲ್ಲಿನ ಎಟಿಎಂಗಳಲ್ಲಿ ಹಣ ಹಾಕದೇ ಖಾಲಿ ಆಗಿತ್ತು. ಕೆಲವು ಎಟಿಎಂಗಳು ವಾರ ಕಳೆದಿದ್ದರೂ ಹಣ ತುಂಬಿಸಿಲ್ಲ. ಇಂದು ಕೂಡ ಗೋಕರ್ಣಕ್ಕೆ ಆಗಮಿಸಿದ ಹಲವು ವಿದೇಶಿ ಪ್ರವಾಸಿಗರು ಹಣಕ್ಕಾಗಿ ಪರದಾಡಿದ ದೃಶ್ಯ ಕಂಡು ಬಂತು. ಒಟ್ಟು ನಾಲ್ಕು ಎಟಿಎಂ ಕೇಂದ್ರಗಳಿದ್ದು, ಎಲ್ಲಾ ಕೇಂದ್ರಗಳು ಖಾಲಿಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos