ವಿಶ್ವದ ಅತಿ ಗಿಡ್ಡ ಮಹಿಳೆಯಿಂದ ಮತದಾನ

ವಿಶ್ವದ ಅತಿ ಗಿಡ್ಡ ಮಹಿಳೆಯಿಂದ ಮತದಾನ

ನಾಗ್ಪುರ, . 11, ನ್ಯೂಸ್ ಎಕ್ಸ್ ಪ್ರೆಸ್: ನಾಗ್ಪುರದಲ್ಲಿ ಇಂದು ನಡೆದ ಲೋಕಸಭಾ ಚುನಾವಣೆಯಲ್ಲಿ ವಿಶ್ವದ ಅತಿ ಗಿಡ್ಡ ಮಹಿಳೆ, ನಟಿ ಹಾಗೂ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿರುವ ಜ್ಯೋತಿ ಅಮ್ಗೆ ಮತ ಕೇಂದ್ರಕ್ಕೆ ತೆರಳಿ ಮತದಾನ ಮಾಡುವ ಮೂಲಕ ಎಲ್ಲರ ಗಮನ ತನ್ನತ್ತ ಸೆಳೆದಿದ್ದಾರೆ.

2 ಅಡಿ, 1 ಇಂಚು ಎತ್ತರದ 25ರ ಹರೆಯದ ಜ್ಯೋತಿ ತಾಳ್ಮೆಯಿಂದ ಸರದಿ ಸಾಲಿನಲ್ಲಿ ನಿಂತು ತನ್ನ ಮತದಾನದ ಹಕ್ಕು ಚಲಾಯಿಸಿದರು.

”ಎಲ್ಲರೂ ಮತ ಹಾಕುವಂತೆ ನಾನು ವಿನಂತಿಸುವೆ. ದಯವಿಟ್ಟು ಮೊದಲಿಗೆ ಮತ ಚಲಾಯಿಸಿ, ಆ ಬಳಿಕ ನಿಮ್ಮ ಎಲ್ಲ ಕೆಲಸವನ್ನು ಮಾಡಿ ಮುಗಿಸಿ” ಎಂದು ತನ್ನ ಕೈಬೆರಳಿಗೆ ಹಾಕಿರುವ ಶಾಯಿಯನ್ನು ಪ್ರದರ್ಶಿಸುತ್ತಾ ಅಮ್ಗೆ ಸುದ್ದಿಗಾರರಿಗೆ ತಿಳಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos