ಆಟ, ಪಾಠವು ಒಂದೇ ಉದ್ಯೋಗ ಒಂದೇ

ಆಟ, ಪಾಠವು ಒಂದೇ ಉದ್ಯೋಗ ಒಂದೇ

ಜೂನ್.10, ನ್ಯೂಸ್ ಎಕ್ಸ್ ಪ್ರೆಸ್: ಅವರಿಬ್ಬರು ಅವಳಿ ಸಹೋದರರು. ಇಬ್ಬರ ಅಭಿರುಚಿ ಒಂದೇ. ಓದು, ಆಟ, ಪಾಠ ಕೊನೆಗೆ ಇದೀಗ ಉದ್ಯೋಗ ಕೂಡ ಒಂದೇ ಆಗಿದೆ. ಒಬ್ಬ ಮಗನನ್ನೇ ಸೇನೆಗೆ ಕಳುಹಿಸುವುದು ಕಷ್ಟ, ಆದರೆ, ಜಲಂದರ್ ನ ಇವರು, ತಮ್ಮ ಅವಳಿ ಮಕ್ಕಳನ್ನು ಸೇನೆಗೆ ಸೇರಿದ್ದಾರೆ.

ಅಭಿನವ್, ಪರಿಣವ್ 2 ಅವಳಿ ಸಹೋದರರು. ಇಬ್ಬರು 2 ನಿಮಿಷಗಳ ಹಿಂದೆ-ಮುಂದೆ ಹುಟ್ಟಿದವರು. ಇಬ್ಬರು ಕೂಡ ಎಂಜಿನಿಯರಿಂಗ್ ಪದವೀಧರರು. ಇಬ್ಬರ ಕನಸು ಕೂಡ ಒಂದೇ ಅದು ಭಾರತೀಯ ಸೇನೆಗೆ ಸೇರುವುದು. ಅವಳಿ ಸಹೋದರು ಒಂದೇ ಬಾರಿ , ಒಂದೇ ಬ್ಯಾಚ್ ನಲ್ಲಿ ಸೇನೆಗೆ ಆಯ್ಕೆಯಾಗಿದ್ದು ಸೇನೆಯಲ್ಲಿ ಕೂಡ ಆಶ್ಚರ್ಯ ಉಂಟು ಮಾಡಿದೆ.

ಎಷ್ಟೋ ಬಾರಿ ಸೇನೆಯ ಬೋಧಕರು ಗೊಂದಲಕ್ಕೆ ಒಳಗಾಗಿದ್ದೂ ಇದೆ. ಅವರ ಹೆಸರು ಇವರಿಗೆ, ಇವರ ಹೆಸರು ಅವರಿಗೆ ಕರೆಯುತ್ತಿದ್ದರು. ಅಲ್ಲದೇ ಒಬ್ಬರ ಮೆಸ್ ನಲ್ಲಿ ಮತ್ತೊಬ್ಬರು ಹೋಗಿ ಊಟ ಮಾಡಿ ಬಂದ್ರು ಗೊತ್ತಾಗುತ್ತಿರಲಿಲ್ಲ ಅಂಥ ಸಹೋದರರು ಮಾಧ್ಯಮಗಳ ಜೊತೆ ಅನಿಸಿಕೆ ಹಂಚಿಕೊಂಡರು. ಅವಳಿ-ಜವಳಿ ಇಬ್ಬರು ಸೇನೆಯಲ್ಲಿದ್ರು ಬೇರೆ ಬೇರೆ ಘಟಕಗಳಿಗೆ ನಿಯೋಜನೆ ಮಾಡಲಾಗಿದೆ. ಮಿಲಿಟರಿ ಆಕಾಡೆಮಿಯಲ್ಲಿ ನಡೆದ ನಿರ್ಗಮನ ಪಥ ಸಂಚಲನದಲ್ಲಿ ಭಾಗವಹಿಸಿ ಕುತೂಹಲ ಮೂಡಿಸಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos