ಇಂದು ಆಸೀಸ್ ಇಂಗ್ಲೆಂಡ ಮುಖಾಮುಖಿ

ಇಂದು ಆಸೀಸ್ ಇಂಗ್ಲೆಂಡ ಮುಖಾಮುಖಿ

ಬರ್ಮಿಂಗ್ಹ್ಯಾಮ್, ಜು. 11 : ವಿಶ್ವ ಚಾಂಪಿಯನ್ ಆಸ್ಪ್ರೇಲಿಯಾ ಹಾಗೂ ಆತಿಥೇಯ ಇಂಗ್ಲೆಂಡ್, ಗುರುವಾರ ಐಸಿಸಿ ಏಕದಿನ ವಿಶ್ವಕಪ್ನ 2ನೇ ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಆಸ್ಪ್ರೇಲಿಯಾ ಸತತ 2ನೇ ಬಾರಿಗೆ ಫೈನಲ್ ಪ್ರವೇಶಿಸುವ ಗುರಿ ಹೊಂದಿದ್ದರೆ, 1992ರ ಬಳಿಕ ಮೊದಲ ಬಾರಿಗೆ ಫೈನಲ್ಗೇರುವ ಉತ್ಸಾಹದಲ್ಲಿ ಇಂಗ್ಲೆಂಡ್ ಇದೆ. ಉಭಯ ತಂಡಗಳು ರೌಂಡ್ ರಾಬಿನ್ ಹಂತದಲ್ಲಿ ಮುಖಾಮುಖಿಯಾದಾಗ, ಆಸ್ಪ್ರೇಲಿಯಾ 64 ರನ್ಗಳಿಂದ ಗೆಲುವು ಸಾಧಿಸಿತ್ತು.
ಆಸ್ಪ್ರೇಲಿಯಾ ಅತ್ಯುತ್ತಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಹೊಂದಿದೆ. ಇಂಗ್ಲೆಂಡ್ ಪ್ರಚಂಡ ಬ್ಯಾಟ್ಸ್ಮನ್ಗಳನ್ನು ಹೊಂದಿದ್ದರೂ, ಬೌಲಿಂಗ್ನಲ್ಲಿ ಕಾಂಗರೂ ಪಡೆಯಷ್ಟು ಬಲಿಷ್ಠವಾಗಿಲ್ಲ. ಇಂಗ್ಲೆಂಡ್ ಮೊದಲು ಬ್ಯಾಟ್ ಮಾಡಿ 300ಕ್ಕಿಂತ ಹೆಚ್ಚಿನ ಮೊತ್ತ ದಾಖಲಿಸಿದರೆ ಗೆಲ್ಲುವ ಸಾಧ್ಯತೆ ಹೆಚ್ಚಿರಲಿದೆ. ಮೇಲ್ನೋಟಕ್ಕೆ ಆಸ್ಪ್ರೇಲಿಯಾ ಗೆಲ್ಲುವ ನೆಚ್ಚಿನ ತಂಡವಾಗಿ ತೋರುತ್ತಿದ್ದು ಸತತ 2ನೇ ಬಾರಿಗೆ ಆಸ್ಪ್ರೇಲಿಯಾ-ನ್ಯೂಜಿಲೆಂಡ್ ನಡುವೆ ಫೈನಲ್ ಸೆಣಸಾಟ ಏರ್ಪಡುವ ಸಾಧ್ಯತೆ ಇದೆ.

ಫ್ರೆಶ್ ನ್ಯೂಸ್

Latest Posts

Featured Videos