ಸ್ಟೇಷನ್ ಆಪರೇಟರ್ ಮೇಲೆ ಹಲ್ಲೆ

ಸ್ಟೇಷನ್ ಆಪರೇಟರ್ ಮೇಲೆ ಹಲ್ಲೆ

ಬೇಲೂರು: ವಿದ್ಯುತ್ ಸರಬರಾಜು ಕಡಿತಗೊಂಡಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಗಂಗೂರು ಗ್ರಾಮದ ಉಪ ವಿದ್ಯುತ್ ವಿತರಣಾ ಕೇಂದ್ರದ ಸ್ಟೇಷನ್ ಆಪರೇಟರ್ ಹೇಮಂತಕುಮಾರ್ ಮೇಲೆ ಗಂಗೂರು ಗ್ರಾಮದ ಜೆಡಿಎಸ್ ಪ್ರಮುಖ ರಾಮಚಂದ್ರ ಹಾಗೂ ಬಸವರಾಜು ಎಂಬುವರು ಹಲ್ಲೆ ನಡೆಸಿರುವ ಘಟನೆ ಜರುಗಿದೆ.
ಹೇಮಂತಕುಮಾರ್ ಹಳೇಬೀಡು ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಕರ್ತವ್ಯಕ್ಕೆ ಅಡ್ಡಿ ಹಾಗೂ ಅವಾಚ್ಯಶಬ್ಧಬಳಕೆ, ನಿಂದನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ಕುರಿತು ಗಂಗೂರು ರಾಮಚಂದ್ರ ಅವರು ಅವಾಚ್ಯ ಶಬ್ಧ ಬಳಕೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾರ್ವಜನಿಕರು ಹಾಗೂ ಸರ್ಕಾರಿ ನೌಕರರು ಗಂಗೂರು ರಾಮಚಂದ್ರ ಅವರ ವರ್ತನೆಯನ್ನು ಖಚಿಡಿಸದ್ದಾದ್ದಾರೆ.
ವಿವರ: ಸೆಪ್ಟಂಬರ್ ೨೪ ರಂದು ಮಧ್ಯಾಹ್ನ ೨.೨೭ ರ ಸಮಯದಲ್ಲಿ ಮೊದಲಿಗೆ ದೂರವಾಣಿ ಕರೆ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ವಿದ್ಯುತ್ ಲೈನ್‌ಮೆನ್ ಸಂಪರ್ಕಿಸಿ ದುರಸ್ತಿ ಮಾಡಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಗಂಗೂರು ರಾಮಚಂದ್ರ ಏಕವಚನದಲ್ಲಿ ನಿಂಧಿಸಿದ್ದಾರೆ.
ಇದಾದ ನಂತರ ಮಧ್ಯಾಹ್ನ ೩ ಗಂಟೆಗೆ ಗಂಗೂರಿನ ಉಪವಿತರಣಾ ಕೇಂದ್ರಕ್ಕೆ ಆಗಮಿಸಿದ ಗಂಗೂರು ರಾಮಚಂದ್ರ ಹಾಗೂ ಬಸವರಾಜು ಅವರು ಬಾಯಿಗೆ ಬಂದಂತೆ ಅವಾಚ್ಯಶಬ್ಧದಿಂದ ಸಂಬೋಧಿಸಿ ಬೈದಿದ್ದಲ್ಲದೆ ಅಕ್ರಮವಾಗಿ ಕಚೇರಿಯೊಳಗೆ ನುಗ್ಗಿ ಹೇಮಂತಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos