ವಯಸ್ಸಾಗುವಿಕೆಯನ್ನು ತಡೆಯುವ ಗಿಡ ಆಶಿಟಾಬಾ!

ವಯಸ್ಸಾಗುವಿಕೆಯನ್ನು ತಡೆಯುವ ಗಿಡ ಆಶಿಟಾಬಾ!

ಬೆಂಗಳೂರು, ಮಾ, 21, ನ್ಯೂಸ್ ಎಕ್ಸ್ ಪ್ರೆಸ್: ವಯಸ್ಸಾಗುವಿಕೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಈ ಗಿಡದ ಹೆಸರು ಆಶಿಟಾಬಾ. ಇದನ್ನು ಜಪಾನ್ ನಲ್ಲಿ ಟುಮಾರೊಸ್ ಲೀಫ್ ಎಂದು ಕರೆಯಲಾಗುತ್ತದೆ. ಈ ಸಸ್ಯವನ್ನು ಸೇವಿಸುವುದರಿಂದ ದೀರ್ಘಾಯುಷ್ಯದ ಜೊತೆ ಯೌವನವನ್ನು ಪಡೆಯಬಹುದು ಎಂದು ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಹಲವಾರು ಗಿಡಮೂಲಿಕೆ ಔಷಧಿಗಳಲ್ಲಿ ಇದನ್ನು ಬಳಸಲಾಗುತ್ತದೆ. ಈ ಸಸ್ಯವನ್ನು ತರಕಾರಿಯಂತೆ ತಾಜಾವಾಗಿ ತಿನ್ನಬಹುದಂತೆ. ಅಲ್ಲದೆ ಇದರಿಂದ ಇನ್ನೂ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಈ ಆಶಿಟಾಬಾ ಸಸ್ಯವೂ ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.

ತೂಕ ಇಳಿಕೆಗೆ ಸಹಾಯ: ಈ ಸಸ್ಯವು ತೂಕ ನಷ್ಟದಲ್ಲಿ ಸಹಾಯವಾಗುವ ಹಾರ್ಮೋನಿನ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

ಕ್ಯಾನ್ಸರ್ ಫೈಟ್ಸ್: ಕ್ಯಾನ್ಸರ್ ಸೆಲ್ಸ್ ಇತರ ಭಾಗಗಳಿಗೆ ಹರಡುವುದನ್ನು ತಡೆಯುತ್ತದೆ.

ಮಧುಮೇಹವನ್ನು ನಿಯಂತ್ರಿಸುತ್ತದೆ. ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುವ ಶಕ್ತಿ ಈ ಸಸ್ಯಕ್ಕೆ ಇದೆ.

ಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ. ಆಶಿಟಾಬಾ ಸಸ್ಯವೂ ಚಾಲ್ಕೊನ್ ಅನ್ನು ಹೊಂದಿದೆ. ಇದು ರಕ್ತದೊತ್ತಡ ಕಡಿಮೆ ಮಾಡುತ್ತದೆ.

ಫ್ಲು ಫೈಟರ್: ವೈರಸ್ ನಿಂದ ಬರುವ ಶೀತ, ಜ್ವರ ರೋಗ ಲಕ್ಷಣಗಳನ್ನು ಗುಣಪಡಿಸಬಹುದು.

ಹೃದಯಕ್ಕೆ ಒಳ್ಳೆಯದು. ಪೊಟಾಸಿಯಂ ಹೆಚ್ಚಿರುವ ಕಾರಣ ಹೃದಯದ ಆರೋಗ್ಯಕ್ಕೆ ಒಳ್ಳೆಯದು.

ಇಮ್ಯೂನ್ ಸಿಸ್ಟಮ್ ಹೆಚ್ಚಿಸುತ್ತದೆ. ಸೋಂಕುಗಳನ್ನು ದೂರಮಾಡುವ ಶಕ್ತಿ ಈ ಸಸ್ಯಕ್ಕೆ ಇದೆ.

 

ಫ್ರೆಶ್ ನ್ಯೂಸ್

Latest Posts

Featured Videos