ಆರೋಗ್ಯ ಕಾರ್ಡ್ ಮನೆ ಮನೆಗೆ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ

ಆರೋಗ್ಯ ಕಾರ್ಡ್ ಮನೆ ಮನೆಗೆ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ

ಬೆಂಗಳೂರು, ಜೂ. 18: ನಗರದ ಪೀಣ್ಯದಾಸರಹಳ್ಳಿ ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ಯೋಜನೆ ಆರ್ಥಿಕವಾಗಿ ಹಿಂದುಳಿದವರಿಗೆ ತುಂಬಾ ಅನುಕೂಲವಾಗುತ್ತಿರುವುದರಿಂದ ಅವುಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಶ್ಲಾಘನೀಯ ಎಂದು ಪಾಲಿಕೆ ಸದಸ್ಯ ಎನ್.ಲೋಕೇಶ್ ಹೇಳಿದರು.

ಭುವನೇಶ್ವರಿ ನಗರದಲ್ಲಿ ಕರ್ನಾಟಕ ಜನಸ್ಪಂಧನ ಟ್ರಸ್ಟ್ ಹಾಗೂ ಸಿರಿನಿಧಿ ಕೋ ಆಪರೇಟಿವ್ ಸೊಸೈಟಿ ಜಂಟಿಯಾಗಿ ಹಮ್ಮಿಕೊಂಡಿದ್ದ ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ಮಾಡಿಸಿ ಮನೆ ಮನೆಗೆ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಿಮ್ಮಂತಹ ಟ್ರಸ್ಟ್ ಗಳು ಸಂಘ ಸಂಸ್ಥೆಗಳು ಮುಂದೆ ಬಂದು ಸರ್ಕಾರದ ಯೋಜನೆಗಳನ್ನು ಬಡಜನರ ಮನೆಗಳಿಗೆ ತಲುಪಿಸಿ ತಿಳುವಳಿಕೆ ನೀಡುತ್ತಿರುವುದು, ಅದರಲ್ಲೂ ನಮ್ಮ ಮಲ್ಲಸಂದ್ರ ವಾರ್ಡ್ ನಲ್ಲಿ ಈ ಕೆಲಸ  ಮಾಡುತ್ತಿರುವುದು ಶ್ಲಾಘನೀಯ ಎಂದರು.

ಈ ವೇಳೆ ಸಿರಿನಿಧಿ ಕೋ ಆಪರೇಟಿವ್ ಸೊಸೈಟಿಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್, ಕರ್ನಾಟಕ ಜನಸ್ಪಂದನ ಟ್ರಸ್ಟ್ ನ ಹನುಮಂತಪ್ಪ ಮೇಡೇಗಾರ್, ಕಾರ್ಯದರ್ಶಿ ಎಂ.ಆರ್. ನದಾಫ್ ಹಾಗೂ ಸಾರ್ವಜನಿಕ ರು ಭಾಗವಹಿಸಿ ತಮ್ಮ ತಮ್ಮ ಆರೋಗ್ಯವಿಮೆ ಕಾರ್ಡ್ ಗಳನ್ನು ನೊಂದಾಯಿಸಿಕೊಂಡರು.

 

 

ಫ್ರೆಶ್ ನ್ಯೂಸ್

Latest Posts

Featured Videos