ಅರ್ಜುನ್ ಜೊತೆಗೂಡಲಿದ್ದಾಳೆ ರಶ್ಮಿಕಾ

ಅರ್ಜುನ್ ಜೊತೆಗೂಡಲಿದ್ದಾಳೆ ರಶ್ಮಿಕಾ

ಹೈದರಾಬಾದ್, ಏ. 8, ನ್ಯೂಸ್ ಎಕ್ಸ್ ಪ್ರೆಸ್: ಸದ್ಯ ಸಿನಿಮಾ ರಂಗದಲ್ಲೆ ಹೆಚ್ಚು ಬೇಡಿಕೆ ಇರುವ ನಟಿ ಎಂದರೆ ಅದು ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ. ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಾನ್ವಿ ಬಣ್ಣದ ಜಗತ್ತಿಗೆ ಕಾಲಿಟ್ಟ ರಶ್ಮಿಕಾ ಮತ್ತೆ ಹಿಂದೆ ನೋಡಲೇ ಇಲ್ಲ. ಮಾಡಿದ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್. ಕೇವಲ ಕನ್ನಡವಷ್ಟೆ ಅಲ್ಲ. ಪರಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡಳು ನಮ್ಮ ಸ್ಯಾಂಡಲ್ ವುಡ್ ಬೆಡಗಿ.

ರಶ್ಮಿಕಾ ಮಂದಣ್ಣ  ನಟಿಸಿದ ಎಲ್ಲಾ ಚಿತ್ರವು ಕೂಡ ಸೂಪರ್ ಹಿಟ್. ಈಗ ದೊಡ್ಡ ಪ್ರಾಜೆಕ್ಟ್ ಗೆ ಸಹಿ ಮಾಡಿದ್ದಾಳೆ. ಸುಕುಮಾರ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆಗೂಡಲಿದ್ದಾಳೆ. ಟ್ವಿಟ್ಟರ್ನಲ್ಲಿ ಅಲ್ಲು ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸುತ್ತಾ ತುಂಬಾ ಸಂತಸವಾಗುತ್ತಿದೆ, ಅಲ್ಲು ಅರ್ಜುನ್ ಜೊತೆ ಶೀಘ್ರವಾಗಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ಬರೆದುಕೊಂಡಿದ್ದಾಳೆ.

ಫ್ರೆಶ್ ನ್ಯೂಸ್

Latest Posts

Featured Videos