ಕಟ್ಟಿ ಹಾಕಿದ ಶ್ವಾನಗಳು ಸಾವು

ಕಟ್ಟಿ ಹಾಕಿದ ಶ್ವಾನಗಳು ಸಾವು

ಮುಂಬೈ, ಸೆ. 9 : ಅಪರಿಚಿತರು ಬಿಡಾಡಿ ಶ್ವಾನಗಳ ಬಾಯಿ ಮತ್ತು ಕಾಲುಗಳನ್ನು ಕಟ್ಟಿ ಹಾಕಿ ಅರಣ್ಯ ಪ್ರದೇಶದಲ್ಲಿ ಬಿಸಾಡಿರುವ ಘಟನೆ ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿ ನಡೆದಿದೆ.
ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ 100ಕ್ಕೂ ಹೆಚ್ಚು ಬಿಡಾಡಿ ನಾಯಿಗಳನ್ನು ಹಿಡಿದಿರುವ ಅಪರಿಚಿತರು ಕಟ್ಟಿಹಾಕಿ ಅರಣ್ಯ ಪ್ರದೇಶದಲ್ಲಿ ಬಿಸಾಡಿ ಹಿನ್ನಲೆ 90ಕ್ಕೂ ಹೆಚ್ಚು ನಾಯಿಗಳು ಸತ್ತಿವೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಜೀವಂತವಾಗಿದ್ದ 10ಕ್ಕೂ ಹೆಚ್ಚು ನಾಯಿಗಳನ್ನು ಬಂಧನದಿಂದ ಬಿಡುಗಡೆ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos