ಅಪ್ಪು ಬರ್ತ್​ಡೇಗೆ ಸಿಕ್ತು ಫ್ಯಾನ್ಸ್‌ ಗೆ ಗುಡ್‌ ನ್ಯೂಸ್

ಅಪ್ಪು ಬರ್ತ್​ಡೇಗೆ ಸಿಕ್ತು ಫ್ಯಾನ್ಸ್‌ ಗೆ ಗುಡ್‌ ನ್ಯೂಸ್

ಬೆಂಗಳೂರು: ನಟ ಪುನೀತ್ ರಾಜಕುಮಾರ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ಪುನೀತ್ ರಾಜಕುಮಾರ್ ಎಂದ ತಕ್ಷಣ ನಮಗೆ ಬರುವುದು ಅವರ ನಗುಮುಖ, ಹಾಗೂ ಅವರ ಸರಳತೆ ಅವರು ಹಿರಿಯರಿಗೆ ಹಾಗೂ ಕಿರಿಯರಿಗೆ ನೀಡುವ ಗೌರವ. ಅಪ್ಪು ದೊಡ್ಡ ಸೆಲೆಬ್ರಿಟಿಯ ಮಗನಾದರು ಸಹ ಆಡಂಬರವಿಲ್ಲದೆ ಜನಸಾಮಾನ್ಯರ ಜೊತೆ ಸಾಮಾನ್ಯರಾಗಿದ್ದರೂ ಪುನೀತ್ ರಾಜಕುಮಾರ್ ಅವರು ಅಭಿಮಾನಿಗಳನ್ನು ಪ್ರೀತಿಯಿಂದ ಅಭಿಮಾನಿ ದೇವ್ರು ಅಂತ ಕರೆಯುತ್ತಿದ್ದರು.

ಪುನೀತ್ ರಾಜ್​ಕುಮಾರ್ ಅವರು ನಮ್ಮೊಂದಿಗೆ ಇಲ್ಲ. ಅವರನ್ನು ನಿತ್ಯ ನೆನಪಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಮಾರ್ಚ್​ 17ರಂದು ಅವರ ಬರ್ತ್​ಡೇ. ಅವರು ಇಲ್ಲದೇ ಅಭಿಮಾನಿಗಳು ಮೂರನೇ ಬಾರಿಗೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿ ಬಾರಿ ಅವರ ಜನ್ಮದಿನಕ್ಕೆ ಒಂದು ವಿಶೇಷತೆ ಇರುತ್ತದೆ. ಈ ಬಾರಿಯೂ ಪುನೀತ್​ ಬರ್ತ್​ಡೇಗೆ ಒಂದು ವಿಶೇಷತೆ ಇದೆ. ಅವರ ನಟನೆಯ ‘ಜಾಕಿ’ ಸಿನಿಮಾ ರೀ-ರಿಲೀಸ್ ಆಗುತ್ತಿದೆ.

‘ಜಾಕಿ’ ಸಿನಿಮಾ ರಿಲೀಸ್ ಆಗಿದ್ದು 2010ರಲ್ಲಿ. ಈ ಚಿತ್ರವನ್ನು ದುನಿಯಾ ಸೂರಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಪುನೀತ್​ಗೆ ಜೊತೆಯಾಗಿ ನಟಿಸಿದ್ದು ಭಾವನಾ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲೂ ಉತ್ತಮ ಗಳಿಕೆ ಮಾಡಿತ್ತು. ಈ ಚಿತ್ರವನ್ನು ಪುನೀತ್ ತಾಯಿ ಪಾರ್ವತಮ್ಮ ರಾಜ್​ಕುಮಾರ್ ಅವರು ನಿರ್ಮಾಣ ಮಾಡಿದ್ದರು. ವಿ. ಹರಿಕೃಷ್ಣ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು. ಈ ಸಿನಿಮಾ ಈಗ ರೀ ರಿಲೀಸ್ ಆಗುತ್ತಿದೆ.

‘ಜಾಕಿ’ ಚಿತ್ರವನ್ನು ಅಪ್​​ಗ್ರೇಡ್ ಮಾಡುವ ಕೆಲಸ ನಡೆಯುತ್ತಿದೆ. 4K ರೀ ಮಾಸ್ಟರ್ಡ್ ವರ್ಷನ್​ನಲ್ಲಿ ಸಿನಿಮಾ ಮರುಬಿಡುಗಡೆ ಆಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಪುನೀತ್ ಬರ್ತ್​ಡೇ ದಿನ ಅನ್ನದಾನ, ರಕ್ತದಾನ ಮತ್ತು ನೇತ್ರಾದಾನ ಮಾಡಲು ಫ್ಯಾನ್ಸ್ ಸಿದ್ದತೆ ಮಾಡಿಕೊಂಡಿದ್ದಾರೆ. ಈ ಸಿನಿಮಾ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos