ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಅಪ್ಪು

ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಅಪ್ಪು

ಬೆಂಗಳೂರು, ಮಾ. 17: ಬಾಲನಟನಾಗಿ ಚಂದನವನಕ್ಕೆ ಕಾಲಿಟ್ಟು, ದಶಕಗಳಿಂದ ಕನ್ನಡ ಸಿನಿರಸಿಕರನ್ನ ರಂಜಿಸುತ್ತಾ ಬರುತ್ತಿರೋ ರಾಜರತ್ನನ ಕಂಡರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ, ಅಭಿಮಾನ. ಹೌದು, ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್​ 45ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಈ ಬಾರಿ ಕೊರೊನಾ ಭೀತಿಯಿಂದ ಅಪ್ಪು ಬರ್ತ್ ಡೇ ಸೆಲೆಬ್ರೇಷನ್ ಮಾಡಿಕೊಳ‍್ಳೂತ್ತಿಲ್ಲ. ನೀವೆಲ್ಲಾ ಸುರಕ್ಷಿತವಾಗಿದ್ದರೆ ಅದೇ ನನಗೆ ಉಡುಗೊರೆ ಅಂತಾ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಹೀಗಾಗಿ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕವೇ ಅಪ್ಪುಗೆ ಶುಭಾಶಯಗಳ ಮಹಾಪೂರವನ್ನೇ ಹರಿಸ್ತಿದ್ದಾರೆ. ಮಧ್ಯರಾತ್ರಿಯಿಂದಲೇ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ.

ಹುಟ್ಟುಹಬ್ಬದ ಸಂಭ್ರಮ ಹೆಚ್ಚಿಸೋಕೆ ಅವರ ಬಹುನಿರೀಕ್ಷಿತ ಯುವರತ್ನ ಚಿತ್ರದ 2ನೇ ಡೈಲಾಗ್ ಟೀಸರ್ ನಿನ್ನೆಯೇ ರಿಲೀಸ್ ಆಗಿದೆ. ಮೊದಲ ಟೀಸರ್​ನಲ್ಲಿ ರಗ್ಬಿ ಆಟಗಾರನಾಗಿ ಕಾಣಿಸಿಕೊಂಡಿದ್ದ ಅಪ್ಪು 2ನೇ ಟೀಸರ್​ನಲ್ಲಿ ಕಾಲೇಜ್ ಹುಡುಗನಾಗಿ ತುಂಟನಂತೆ, ಅಷ್ಟೇ ಖದರ್ ಫುಲ್ ಆಗಿ ಡೈಲಾಗ್ ಹೊಡೆದಿದ್ದಾರೆ.

ಅಭಿಮಾನಿಗಳು ಯುವರತ್ನ ಸಿನಿಮಾ ರಿಲೀಸ್ ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಕಾದುನೋಡಬೇಕಿದೆ ರಿಲೀಸ್ ಆದಮೇಲೆ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದು.

ಫ್ರೆಶ್ ನ್ಯೂಸ್

Latest Posts

Featured Videos