ಅಪ್ಪು ಫ್ಯಾನ್ಸ್ ದಿಲ್ಖುಷ್

ಅಪ್ಪು ಫ್ಯಾನ್ಸ್ ದಿಲ್ಖುಷ್

ಬೆಂಗಳೂರು, ಮಾ. 23, ನ್ಯೂಸ್ ಎಕ್ಸ್ ಪ್ರೆಸ್: ಪವರ್‌ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಯುಗಾದಿ ಹಬ್ಬದ ಮುನ್ನವೇ ಹಬ್ಬ ಬಂದಂತಾಗಿದೆ. ಇದಕ್ಕೆ ಕಾರಣ ದಶಕದ ನಂತರ ಅಪ್ಪು ಮತ್ತೆ ಕಾಲೇಜ್ ಹುಡುಗನಾಗಿ ಕಾಣಿಸಿಕೊಳ‍್ಳುತ್ತಿರೋದು.

ಹೌದು, ಪುನೀತ್ ನಟಿಸುತ್ತಿರುವ ಮತ್ತೊಂದು ಪವರ್​ಫುಲ್  ಚಿತ್ರ ಯುವರತ್ನ. ಯುವರತ್ನ ಚಿತ್ರದಲ್ಲಿ ‘ಪವರ್ ಸ್ಟಾರ್’ಲುಕ್ ಹೇಗಿರುತ್ತೆ ಅಂತಾ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ರಾಮ್ ರಿವೀಲ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪುನೀತ್ ಸ್ಟೈಲಿಶ್ ಆಗಿ ಬೈಕ್ ಏರಿ ಬರ್ತಿರೋ ಫೋಟೋ ಅಪ್ಲೋಡ್ ಮಾಡಿ ಇದೇ ಯುವರತ್ನ ಗೆಟಪ್. ಯುವರತ್ನ 3ನೇ ಹಂತದ ಶೂಟಿಂಗ್ ಶುರು ಅಂತಾ ಹೇಳಿದ್ದಾರೆ.

ಪುನೀತ್ ಸ್ಟುಡೆಂಟ್ ಲುಕ್ನಲ್ಲಿ ಹೇಗೆ ಕಾಣಿಸುತ್ತಾರೆ. ಯಾವ ಗೆಟಪ್ನಲ್ಲಿರ್ತಾರೆ ಅನ್ನೋ ಕುತೂಹಲದಲ್ಲಿದ್ದ ಅಭಿಮಾನಿಗಳ ಕಿಚ್ಚು ಹೆಚ್ಚಿಸಿದೆ ಅಪ್ಪು ಲುಕ್.  ಯಾಕೆಂದರೆ ಪವರ್ಸ್ಟಾರ್ ತಮ್ಮ ಆರಂಭದ ಚಿತ್ರಗಳಾದ ಅಪ್ಪು , ಅಭಿ ಚಿತ್ರಗಳಲ್ಲಿ ಕಾಲೇಜ್ ಹುಡುಗನಾಗಿ ಯುವಜನತೆ ಮನಗೆದ್ದಿದ್ದರು. ಈಗ ಸರಿಯಾಗಿ 16 ವರ್ಷಗಳ ನಂತರ ಮತ್ತೆ ಸ್ಟೈಲಿಶ್ ಕಾಲೇಜ್ ಕುಮಾರನಾಗಿ ಎಂಟ್ರಿ ಕೊಡುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos