ಲಯನಸ್ ಸೇವೆಗೆ ಶ್ಲಾಘನೆ

ಲಯನಸ್ ಸೇವೆಗೆ ಶ್ಲಾಘನೆ

ತುರುವೇಕೆರೆ: ಕೊರೋನಾ ಸಂಧರ್ಭದಲ್ಲಿ ನಿರಾಶ್ರಿತರ ನೆರವಿಗೆ ಸ್ಪಂದಿಸುವ ಮೂಲಕ ಲಯನ್ಸ್ ಕ್ಲಬ್ ಅತ್ಯುತ್ತಮ ಸೇವೆ ಸಲ್ಲಿಸುತ್ತಿದೆ ಎಂದು ಲಯನ್ಸ್ ಕ್ಲಬ್ ತಾಲೂಕು ಅದ್ಯಕ್ಷ ಬಾಣಸಂದ್ರ ರಾಜಣ್ಣ ತಿಳಿಸಿದರು.
ಪಟ್ಟಣದ ಬಾಣಸಂದ್ರ ವೃತ್ತದಲ್ಲಿ ಕೊರೋನಾ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾಸ್ಕ್ ವಿತರಿಸಿ ಮಾತನಾಡಿದ ಅವರು ಲಯನ್ಸ್ ಕ್ಲಬ್ ತಾಲೂಕಿನಲ್ಲಿ ಅನೇಕ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದು ಕೊರೋನಾ ಸಂಧರ್ಬದಲ್ಲಿ ನಿರಾಶ್ರಿತರಿಗೆ ಆಹಾರ ವಿತರಣೆ, ಮಾಸ್ಕ್ ವಿತರಣೆ, ಸ್ಯಾನಿಟೈಸರ್ ಹಾಗೂ ಶಾಲಾ ಕಾಲೇಜುಗಳಿಗೆ ಕೋವಿಡ್ ಪರೀಕ್ಷಾ ಯಂತ್ರ ವಿತರಣೆ ಜೊತೆಗೆ ದೀನದಲಿತರ ಹಾಗೂ ಅಶಕ್ತರ ನೋವಿಗೆ ಸ್ಪಂದಿಸುವುದರೊಂದಿಗೆ ನಮ್ಮ ಕ್ಲಬ್ ಸಮಾಜಕ್ಕೆ ಅತ್ಯುತ್ತಮ ಸೇವೆ ನೀಡುತ್ತಿದೆ ಎಂದರು.
ಬೀದಿಬದಿ ವ್ಯಾಪಾರಿಗಳು, ಆಟೋ ಚಾಲಕರು, ಹಾಗೂ ಪಾದಚಾರಿಗಳಿಗೆ ಮಾಸ್ಕ್ ವಿತರಿಸುವುದರೊಂದಿಗೆ ಅವರಲ್ಲಿ ಜಾಗೃತಿ ಮೂಡಿಸಲಾಯಿತು. ಲಯನ್ಸ್ ಛಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪಿ.ಹೆಚ್.ಧನಪಾಲ್, ಕಾರ್ಯದರ್ಶಿ ಶಿವಾನಂದ್, ಪದಾಧಿಕಾರಿಗಳಾದ ಮಲ್ಲಿಕಾರ್ಜುನ್, ಸುನಿಲ್ ಬಾಬು, ಲೋಕೇಶ್, ನಾಗರಾಜು, ಶ್ರೀನಿವಾಸ್, ಮಿಹಿರಾಕುಮಾರ್, ಕೈಲಾಸ್, ಅಭಿ, ಸುನಿಲ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos