10 ನೇ ತರಗತಿ ಪಾಸ್ ಆದವರಿಗೆ ರೈಲ್ವೆಯಲ್ಲಿ ನೇಮಕಾತಿ

10 ನೇ ತರಗತಿ ಪಾಸ್ ಆದವರಿಗೆ ರೈಲ್ವೆಯಲ್ಲಿ ನೇಮಕಾತಿ

 ಬೆಂಗಳೂರು, ಅ. 11: ರೈಲ್ವೆ ಇಲಾಖೆಯಲ್ಲಿನ ಸಹಾಯಕ ಲೊಕೊ ಪೈಲಟ್ (ALP) ಮತ್ತು ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ವಿಭಾಗದಲ್ಲಿ ಒಟ್ಟು 306 ಹುದ್ದೆಗಳು ಖಾಲಿ ಇದ್ದು, ಆಸಕ್ತರು ನವೆಂಬರ್ 11ರೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ರೈಲ್ವೆ ನೇಮಕಾತಿ ಸೆಲ್ (ಆರ್ಆರ್ಸಿ) ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಒಟ್ಟು ಹುದ್ದೆಗಳ ಸಂಖ್ಯೆ – 306, ಸಹಾಯಕ ಲೊಕೊ ಪೈಲಟ್ – 85 ಹುದ್ದೆಗಳು. ತಂತ್ರಜ್ಞ (ಟೆಕ್ನಿಷಿಯನ್) – 221 ಹುದ್ದೆಗಳು

ವಿದ್ಯಾರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10 ನೇ ತರಗತಿ ಪಾಸ್ ಆಗಿರಬೇಕು. ಹಾಗೆಯೇ ಇದರೊಂದಿಗೆ ಐಐಟಿಗೆ ಪ್ರಮಾಣ ಪತ್ರ ಹೊಂದಿರಬೇಕಾಗುತ್ತದೆ.

ವಯೋಮಿತಿ: ಅರ್ಜಿದಾರರ ಕನಿಷ್ಠ ವಯಸ್ಸು 18 ಮತ್ತು ಗರಿಷ್ಠ 42 ವರ್ಷಗಳ ಒಳಗಿರಬೇಕು. ಗರಿಷ್ಠ ವಯಸ್ಸಿನಲ್ಲಿ, ಒಬಿಸಿಗೆ 3, ಎಸ್ಸಿ / ಎಸ್ಟಿ 5 ವರ್ಷಗಳ ವಿನಾಯಿತಿ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಆಯ್ಕೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ನಡೆಯಲಿದೆ.

ವೇತನ: ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭಿಕ ವೇತನ 19,900 ರೂ. ನೀಡಲಾಗುತ್ತದೆ. ಇದರೊಂದಿಗೆ ತಿಂಗಳ ಬೋನಸ್ ಕೂಡ ಸಿಗಲಿದೆ.

ಪ್ರಮುಖ ದಿನಾಂಕ: ಅರ್ಜಿ ಸಲ್ಲಿಕೆ ಆರಂಭ: ಅಕ್ಟೋಬರ್ 12, 2019 ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ನವೆಂಬರ್ 11, 2019

ಹೆಚ್ಚಿನ ಮಾಹಿತಿಗಾಗಿ Www.rrc-wr.com ಗೆ ಭೇಟಿ ನೀಡುವ ಮೂಲ ಪರಿಶೀಲಿಸಬಹುದು. ಹಾಗೆಯೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos