ಶ್ರೀ ಮಹಾಬಲೇಶ್ವರ ದೇವಾಲಯದ ಅರ್ಚಕರನ್ನ ಬದಲಾಯಿಸುವಂತೆ ಮನವಿ

ಶ್ರೀ ಮಹಾಬಲೇಶ್ವರ ದೇವಾಲಯದ ಅರ್ಚಕರನ್ನ ಬದಲಾಯಿಸುವಂತೆ ಮನವಿ

ಕೆ.ಆರ್.ಪುರ, ಡಿ. 23: ವೆಂಗಯ್ಯನ ಕೆರೆ ಬಳಿ ಇರುವ ಶ್ರೀ ಮಹಾಬಲೇಶ್ವರ ದೇವಾಲಯದ ಅರ್ಚಕ ವೆಂಕಟೇಶ್ ಅವರನ್ನು ಬದಲಾಯಿಸುವಂತೆ ಗ್ರಾಮದ ಮುಖಂಡರು, ಬೆಂ.ಪೂ.ತಾಲೂಕು ತಹಶಿಲ್ದಾರ್ ಮಂಜುನಾಥ್ ಅವರಿಗೆ ಮನವಿ ಮಾಡಿದರು.

ಬೆಂ.ಪೂರ್ವ ತಾಲೂಕು ತಹಶಿಲ್ದಾರ್ ಮಂಜುನಾಥ್ ಅವರು ದೇವಾಲಯಕ್ಕೆ ಬೇಟಿ ನೀಡಿ ಮಾತನಾಡಿದ ಅವರು, ಪೂರಾತಣ ಚರಿತ್ರೆ ಇರುವ ಮುಜರಾಯಿ ಇಲಾಖೆಗೆ ಸೇರಿದ ಶ್ರೀ ಮಹಾಬಲೇಶ್ವರ ದೇವಾಲಯದ ಅರ್ಚಕರಾಗಿ ಕಾರ್ಯ ನಿರ್ವಹಿಸುತ್ತಿರುವ ವೆಂಕಟೇಶ್ ಅವರು ದೇವಾಲಯ ಹಣವನ್ನು ದುರುಪಯೋಗ ಪಡಿಸಿದ್ದಲ್ಲದೆ ದೇವಾಲಯಕ್ಕೆ ಬರುವ ಭಕ್ತರಿಗೆ ನಾನಾ ರೀತಿಯ ಕಿರುಕುಳ ನೀಡುತ್ತಾ ದೌರ್ಜನ್ಯದಿಂದ ವರ್ತಿಸುತ್ತಿರುತ್ತಿರುವ ಬಗ್ಗೆ ದೂರುಗಳು ಬಂದಿರುತ್ತವೆ ಎಂದರು.

ಅರ್ಚಕ ವೆಂಕಟೇಶ್ ಅವರ ತಂದೆ ಗೋಪಾಲಚಾರ್ ಸುಮಾರು ವರ್ಷಗಳ ಕಾಲ ಈ ದೆವಾಲಯದಲ್ಲಿ ಪೂಜೆ ಸಲ್ಲಿಸಿದ್ದು, ಅವರು ನಿವೃತ್ತಿ ಹೊಂದುವ ಸಮಯದಲ್ಲಿ ಇವರ ಮೂವರು ಮಕ್ಕಳಲ್ಲಿ ಯಾರು ಸಹಾ ಪೂಜೆ ಸಲ್ಲಿಸಲು ಅರ್ಹರಿಲ್ಲದ ಕಾರಣ ಬೇರೆ ಅರ್ಚಕರಿಗೆ ಅವಕಾಶ ಮಾಡಿಕೊಡುವಂತೆ ಮುಜರಾಯಿ ಇಲಾಖೆಗೆ ಪತ್ರಬರೆದಿರುತ್ತಾರೆ ಎಂದರು. ಅಂದಿನ ತಹಶಿಲ್ದಾರ್ ಅವರು ದೇವಾಲಯದಲ್ಲಿ ಪೂಜೆ ನಿಲ್ಲಿಸಬಾರದೆಂಬ ಕಾರಣಕ್ಕೆ ನಿವೃತ್ತಿ ಹೊಂದಿರುವ ಅರ್ಚಕ ಗೋಪಾಲಚಾರ್ ಅವರ ಮೂವರ ಮಕ್ಕಳಲ್ಲಿ ಒಬ್ಬರಾದ ವೆಂಕಟೇಶ್ ರವರನ್ನು ಮರು ಆಯ್ಕೆ ಆಗುವ ತನಕ ತಾತ್ಕಾಲಿಕವಾಗಿ ಪೂಜೆ ಸಲ್ಲಿಸಲು ನಿಯಮಿಸಿರುತ್ತಾರೆ ಎಂದರು.

ಅರ್ಚಕ ವೆಂಕಟೇಶ ಅವರನ್ನು ಬದಲಾಯಿಸುವ ವಿಚಾರವನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸಚ್ಚಿದಾನಂದ ಮೂರ್ತಿ, ಅಂತೋಣಿ ಸ್ವಾಮಿ, ಚಂದ್ರಯ್ಯ, ಎಲ್.ಐ.ಸಿ ವೆಂಕಟೇಶ್, ಶಿವಪ್ಪ, ಜಗದೀಶ್, ಕೆ.ಪಿ ಕೃಷ್ಣ, ವೇಣು, ಪಟಾಕಿ ರವಿ ಸೇರಿದಂತೆ ಹಲವಾರು ಮುಂತಾದವರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos