ಬಡವರಿಗೆ ಉಚಿತ ರೊಟ್ಟಿ ನೀಡುವ ‘ಅಪ್ನಿ ರೋಟಿ’ ಸಂಸ್ಥೆ

ಬಡವರಿಗೆ ಉಚಿತ ರೊಟ್ಟಿ ನೀಡುವ ‘ಅಪ್ನಿ ರೋಟಿ’ ಸಂಸ್ಥೆ

ಕೊಲ್ಕತ್ತ, ಏ. 27, ನ್ಯೂಸ್ ಎಕ್ಸ್ ಪ್ರೆಸ್: ಪ್ರತಿದಿನ ಬಡವರಿಗೆ ಆಹಾರ ನೀಡುವ ಎನ್.ಜಿ.ಒ. ಒಂದು ಕೋಲ್ಕತ್ತದಲ್ಲಿ ರೊಟ್ಟಿ ತಟ್ಟುವ ಯಂತ್ರದ ಮೂಲಕ ರೊಟ್ಟಿಯನ್ನ ಹಂಚಲು ಮುಂದಾಗಿದೆ. ಪ್ರತಿದಿನ 2000 ಜನರಿಗೆ ಎನ್.ಜಿ.ಒ. ರೊಟ್ಟಿ ಹಂಚುತ್ತಿದ್ದು ಅಪ್ನಿ ರೋಟಿ ಎಂಬ ಎನ್.ಜಿ.ಒ.ವನ್ನ ವಿಕಾಸ್ ಅಗರ್ವಾಲ್ ಎಂಬುವರು ನಡೆಸುತ್ತಿದ್ದಾರೆ. ರೊಟ್ಟಿತಟ್ಟುವ ಯಂತ್ರವನ್ನ ದಿನಕ್ಕೆ ಆರು ಬಾರಿ ಓಡಿಸಿದರೆ ಪ್ರತಿ ಒಂದು ಗಂಟೆಗೆ 1000 ರೊಟ್ಟಿಯನ್ನ ಬೇಯಿಸಬಹುದು. ಇದನ್ನ ಎನ್.ಜಿ.ಒ. ಜನವರಿ 1, 2019 ರಿಂದ ಆರಂಭಿಸಿದೆ. ಬಡವರಿಗೆ ನೀಡುವ ರೊಟ್ಟಿ ತಾಜಾ ಹಾಗೂ ಶುಚಿತ್ವವಾಗಿರಬೇಕೆಂಬ ಉದ್ದೇಶದಿಂದ ಈ ಯಂತ್ರವನ್ನ ಖರೀದಿಸಲಾಗಿದೆ. 2018 ಆಗಸ್ಟ್ ರಂದು ಈ ಯಂತ್ರವನ್ನ ಖರೀದಿಸುವ ಯೋಜನೆ ರೂಪಿಸಲಾಗಿತ್ತು. ಅದನ್ನ ಜನವರಿಯಿಂದ ಆರಂಭಿಸಬೇಕೆಂದು ಯೋಚಿಸಲಾಗಿತ್ತು. ಅದರಂತೆ ನಡೆದುಕೊಂಡೆವು ಎಂದು ಅಗರ್ವಾಲ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ನಾವು ಮನೆಯಲ್ಲಿ ತಿನ್ನುವ ಆಹಾರ ಹೇಗೆ ಇರುತ್ತದೆಯೋ ಹಾಗೆ ಬಡವರಿಗೆ ನೀಡುವ ಆಹಾರವೂ ಶುಚಿತ್ವ ಮತ್ತು ತಾಜಾವಾಗಿರಬೇಕೆಂಬ ಯೋಚನೆಯ ಹಿಂದೆ ಹುಟ್ಟಿದ್ದೆ ಈ ರೊಟ್ಟಿ ತಟ್ಟುವ ಯಂತ್ರವೆಂದು ಅವರು ತಿಳಿಸಿದ್ದಾರೆ. ಈ ಯಂತ್ರವನ್ನ ಗುರುಗ್ರಾಮ್ ಮೂಲದ ಪ್ರಿನ್ಸ್ ಇಂಜನಿಯರ್ ಸಂಸ್ಥೆ ತಯಾರಿ ಮಾಡಿದೆ. ಮೂರು ತಿಂಗಳಲ್ಲಿ ಒಂದೂವರೆ ಲಕ್ಷ ರೊಟ್ಟಿಯನ್ನ ತಯಾರಿಸಲಾಗಿದೆ ಎಂದು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos