ಅಂದು ಮುಸುರೆ ತಿಕ್ಕಿದ ವ್ಯಕ್ತಿ ಇಂದು ಸಚಿವ

ಅಂದು ಮುಸುರೆ ತಿಕ್ಕಿದ ವ್ಯಕ್ತಿ ಇಂದು ಸಚಿವ

ಮಾರ್ಗೋವಾ, ಸೆ. 20 : ಜೀವನದಾಗ್ ಬಡತನ, ಹಸಿವು, ಅವಮಾನ ಕಲಿಸುವ ಪಾಠ ಐತಲ್ಲಾ ಅದು ಯಾವ ವಿಶ್ವವಿದ್ಯಾಲಯದೊಳಗ ಸಿಗಾಂಗಿಲ್ಲ. ಆದ್ರ ಅನುಭವಿಸುವ ಆ ನೋವು ಒಂದೊಂದು ರೀತಿಯೊಳಗ ನಮ್ಮ ಬದುಕಿನಲ್ಲಿ ಸಾಧನೆ ಮಟ್ಟಿಲು ಹತ್ತಾಕ ಅನುಕೂಲ ಆಗ್ತೈತಿ. ಅದು ಯಾವುದ ಕೆಲ್ಸಾ ಆಗ್ಲಿ, ಆಟ ಆಗ್ಲೀ , ಪಾಠ ಆಗ್ಲೀ… ಅದರೊಳಗ ನಮ್ಮ ಬದುಕಿನ ತಳ( ನೆಲೆ) ಕಾಣೋದದಲ್ಲಾ ಅದೊಂದು ದೊಡ್ಡ ಸಾಹಸನ ಸರೀ. ಆ ಹುಡುಗ ತನ್ನ 14ನೇ ವಯಸ್ಸಿಗೆ ಮುಸುರೆ ತಿಕ್ಕುವ ಕೆಲಸ ಮಾಡಿಕೊಂಡಿದ್ದ. 24ನೇ ವಯಸ್ಸಿಗೆ ಮರ್ಸಿಡೆಸ್ ಕಾರು ಖರೀದಿಸಿ, ಪ್ರವಾಸೋದ್ಯಮದಲ್ಲಿ ಯಶಸ್ವಿ ಬ್ಯುಸಿನೆಸ್ಮ್ಯಾನ್ ಆಗಿ ಬೆಳೆದ ಆ ವ್ಯಕ್ತಿ ಈಗ ಗೋವಾ ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಲೋಬೊ.
ಪುಟ್ಟ ವಯಸ್ಸಿನಲ್ಲಿ ತಾನು ಕಂಡ ದೈತ್ಯ ಕನಸುಗಳು ತನ್ನ ಜೀವನವನ್ನು ಹೇಗೆ ರೂಪಿಸಿದವು ಎಂಬುದರ ಕುರಿತು ಲೋಬೊ ಮಾತನಾಡಿದರು. ಹೊಟೇಲ್ನಲ್ಲಿ ಪಾತ್ರೆ ತಿಕ್ಕುವ ಕೆಲಸ ಮಾಡಿದ ದಿನಗಳನ್ನು ನೆನಪಿಸಿಕೊಂಡ ಲೋಬೊ, “ನನಗೆ ಈಗಲೂ ನೆನಪಿದೆ, ಆಗ ನನಗೆ 14 ವರ್ಷ. ಒಬ್ಬ ಉದ್ಯಮಿ ಮರ್ಸಿಡಿಸ್ನಲ್ಲಿ ರೆಸ್ಟೋರೆಂಟ್ಗೆ ಬರುತ್ತಿದ್ದರು. ಆಗ ನಾನು ನನ್ನಲ್ಲೇ ಹೇಳಿಕೊಂಡೆ, ‘ಒಂದು ದಿನ ನಾನು ಸಹ ಇಂತಹ ಕಾರಿನ ಒಡೆಯನಾಗುತ್ತೇನೆ. ನಾನು ಬಹಳ ಚಿಕ್ಕ ವಯಸ್ಸಿನಲ್ಲೇ ಈ ಕನಸನ್ನು ಸಾಧಿಸಿದೆ. 24 ನೇ ವಯಸ್ಸಿನಲ್ಲೇ ಮರ್ಸಿಡಿಸ್ ಖರೀದಿಸಿದೆ”

ಫ್ರೆಶ್ ನ್ಯೂಸ್

Latest Posts

Featured Videos