ಮತ್ತೊಂದು ದಾಖಲೆ ಬರೆದ ಧೋನಿ!

ಮತ್ತೊಂದು ದಾಖಲೆ ಬರೆದ ಧೋನಿ!

ಚೆನ್ನೈ, ಮೇ . 14, ನ್ಯೂಸ್ ಎಕ್ಸ್  ಪ್ರೆಸ್: 2019ರ ಐಪಿಎಲ್ 12ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು, 400ಕ್ಕೂ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಐಪಿಎಲ್ ಈ ಸರಣಿಯಲ್ಲಿ ಧೋನಿ 416 ರನ್ ಗಳಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಧೋನಿ ಹೆಚ್ಚು ರನ್ ಗಳಿಸದೆ ಹೋದರು 15 ಪಂದ್ಯಗಳಲ್ಲಿ 416 ರನ್ ಗಳಿಸಲು ಯಶಸ್ವಿಯಾಗಿದ್ದಾರೆ.

ಧೋನಿ 15 ಪಂದ್ಯಗಳಲ್ಲಿ 83.20 ಸರಾಸರಿಯಲ್ಲಿ 416 ರನ್ ಪೇರಿಸಿದ್ದಾರೆ. ಇದರಲ್ಲಿ ಧೋನಿಯ ಅರ್ಧಶತಕ ಕೂಡ ಸೇರಿದೆ. ರನ್ ಮಷಿನ್ ಡೇವಿಡ್ ವಾರ್ನರ್ ಸೇರಿದಂತೆ 12 ಐಪಿಎಲ್ ದಿಗ್ಗಜ ಆಟಗಾರರನ್ನು ಧೋನಿ ಹಿಂದಿಕ್ಕಿದ್ದಾರೆ.ಹೈದ್ರಾಬಾದ್ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ 2ನೇ ಸ್ಥಾನದಲ್ಲಿದ್ದಾರೆ. ವಾರ್ನರ್ 69.20ರ ಸರಾಸರಿಯಲ್ಲಿ 12 ಪಂದ್ಯಗಳಲ್ಲಿ 692 ರನ್ ಗಳಿಸಿದ್ದಾರೆ. ಸರಾಸರಿ ವಿಷ್ಯದಲ್ಲಿ ಧೋನಿ 1 ಸ್ಥಾನದಲ್ಲಿದ್ದಾರೆ. ಬ್ಯಾಟಿಂಗ್ ಸರಾಸರಿ ವಿಷ್ಯದಲ್ಲಿ ಆಂಡ್ರೆ ರಸ್ಸೆಲ್ 3ನೇ ಸ್ಥಾನದಲ್ಲಿದ್ದಾರೆ. ಈ ಐಪಿಎಲ್ ನಲ್ಲಿ ಆಂಡ್ರೆ ರಸ್ಸೆಲ್ ಶೇಕಡಾ 56.66ರ ಸರಾಸರಿಯಲ್ಲಿ 510 ರನ್ ಗಳಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos