ಮೈಸೂರು- ಹೈದ್ರಾಬಾದ್ ಗೆ ಮತ್ತೊಂದು ವಿಮಾನ

ಮೈಸೂರು- ಹೈದ್ರಾಬಾದ್ ಗೆ ಮತ್ತೊಂದು ವಿಮಾನ

ಮೈಸೂರು, ಅ. 28 : ದೀಪಾವಳಿ ಹಬ್ಬದ ಹಿನ್ನೆಲೆ ಇಂಡಿಗೋ ವಿಮಾನ ಸಂಸ್ಥೆ ಮೈಸೂರು-ಹೈದ್ರಾಬಾದ್ ನಡುವೆ ನೂತನ ವಿಮಾನ ಸಂಚಾರ ಆರಂಭಿಸಿದೆ.
ಸಂಸದ ಪ್ರತಾಪ್ಸಿಂಹ ಮೈಸೂರು-ಹೈದ್ರಾಬಾದ್ ನಡುವಿನ ನೂತನ ವಿಮಾನ ಸಂಚಾರಕ್ಕೆ ಚಾಲನೆ ನೀಡಿದರು. ನೂತನ ವಿಮಾನದಲ್ಲಿ ಮೊದಲ ಪ್ರಯಾಣಿಕರಾಗಿ ಮೈಸೂರಿನಿಂದ – ಹೈದ್ರಾಬಾದ್ಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತೆರಳಿದರು.
ರಾತ್ರಿ 7. 40ಕ್ಕೆ ಹೊರಟು ಹೈದ್ರಾಬಾದನ್ನು 9.27ಕ್ಕೆ ತಲುಪಲಿದೆ. ಈ ಮಾರ್ಗವಾಗಿ ಸಂಚರಿಸುತ್ತಿರುವ ಎರಡನೇ ವಿಮಾನ ಇದಾಗಿದೆ. ಟ್ರೂ-ಗೆಟ್ ಸಂಸ್ಥೆ ಈಗಾಗಲೇ ಮೈಸೂರು- ಹೈದ್ರಾಬಾದ್ ನಡುವೆ ವಿಮಾನ ಸಂಚಾರ ಆರಂಭಿಸಿದ್ದು, ಇದು ಎರಡನೇ ವಿಮಾನವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos