ಇಸ್ರೋಗೆ ಮತ್ತೊಂದು ಗರಿ: ಕಾರ್ಟೋಸ್ಯಾಟ್-3 ಯಶಸ್ವಿ ಉಡಾವಣೆ

ಇಸ್ರೋಗೆ ಮತ್ತೊಂದು ಗರಿ: ಕಾರ್ಟೋಸ್ಯಾಟ್-3 ಯಶಸ್ವಿ ಉಡಾವಣೆ

ನವದೆಹಲಿ, ನ. 27: ಭಾರತೀಯ ಬಾಹ್ಯಕಾಶ ಸಂಸ್ಥೆ (ಇಸ್ರೋ) ಇಂದು ಮತ್ತೊಂದು ಉಪಗ್ರಹದ ಉಡಾವಣೆ ನಡೆಸಿದ್ದು ಯಶಸ್ವಿಯಾಗಿದೆ. ಭೌಗೋಳಿಕ ಗಡಿಯನ್ನು ಹೆಚ್ಚು ಸ್ಪಷ್ಟತೆಯಿಂದ ಗುರುತಿಸುವ ಮತ್ತು ಭೂಪಟ ರಚನೆಗೆ ಸಹಾಯಕಾರಿಯಾಗುವ ಕಾಟೋಸ್ಯಾಟ್ – 3 ಉಪಗ್ರಹ ಇಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಸೇರಿದೆ.

ಇದರೊಂದಿಗೆ ಅಮೆರಿಕಾದ ವಾಣಿಜ್ಯೋಧ್ದೇಶದ 13 ನ್ಯಾನೋ ಉಪಗ್ರಹಗಳು ನಭಕ್ಕೆ ಜಿಗಿದಿದ್ದು, ಪಿಎಸ್.ಎಲ್.ವಿ-ಸಿ47 ರಾಕೆಟ್ ಮೂಲಕ ಈ 14 ಉಪಗ್ರಹಗಳ ಉಡಾವಣೆ ಯಶಸ್ಸು ಸಾಧಿಸಿದೆ. ಈ ಎಲ್ಲ ಉಪಗ್ರಹಗಳು ಸೂರ್ಯನ ಸ್ಥಿರ ಕಕ್ಷೆಗೆ ಸೇರಲಿವೆ. ಇನ್ನು ಕಾಟೋಸ್ಯಾಟ್ – 3 ಉಪಗ್ರಹ ಹೈರೆಸಲ್ಯೂಶನ್ ಇಮೇಂಜಿಂಗ್ ಸಾಮರ್ಥ್ಯ ಹೊಂದಿದ್ದು, ಇದು 3ನೇ ತಲೆಮಾರಿನ ಅತ್ಯಾಧುನಿಕ ಸುಧಾರಿತ ಉಪಗ್ರಹವಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos