ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ಕುಸಿತ!

ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ಕುಸಿತ!

ಬೆಂಗಳೂರು , ಸೆ. 8: ಇಂದು ಬೆಂಗಳೂರು ನಗರದಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿರುವ ಪುಟ್ಟನಹಳ್ಳಿ ಕ್ಷೇತ್ರದಲ್ಲಿ 30 ವರ್ಷದ ಹಿಂದೆ ನಿರ್ಮಾಣಗೊಂಡಿ ರುವ ಕಟ್ಟಡ ಕುಸಿತ ಗೊಂಡಿರುವ ಘಟನೆ  ನಡೆದಿದೆ.

ಮಣ್ಣಿನಿಂದ ಮೊದಲೆರಡು ಮಹಡಿ ನಿರ್ಮಾಣ ಮಾಡಿ, ಮೂರನೇ ಮಹಡಿ ಮಾತ್ರ ಸಿಮೆಂಟ್ ಬಳಸಿ ನಿರ್ಮಣ ಮಾಡಲಾಗಿದೆ.  ಮಳೆ ನೀರಿಗೆ ಮೊದಲೆಡು ಮಹಡಿ ಸಂಪೂರ್ಣವಾಗಿ ಶಿಥಿಲವಾಗಿತ್ತು. ಏಳೆಂಟು ವರ್ಷದಿಂದಲೇ ಬೀಳುವ ಆತಂಕದಲ್ಲಿದ್ದ ಕಟ್ಟಡ. ಆದರೂ ಮೂರನೇ ಮಹಡಿಯ ನಿರ್ಮಾಣ ಒಂದು ವರ್ಷದ ಹಿಂದೆ ಮಾಡಲಾಗಿತ್ತು.

ನಿರ್ಮಾಣಗೊಂಡಿರುವ ಈ ಬೃಹತ್ ಕಟ್ಟಡದ  ಮಾಲಿಕರಾದ ಅಶೋಕ್ ಅವರು ಮತ್ತೊಂದು ಮಹಡಿಯನ್ನು ಕಟ್ಟಲು ಪ್ರಾರಂಭಿಸಿರುವಗ ನೆಲ  ಮಹಡಿ ಕುಸಿದಿದೆ ಎಂದು ತಿಳಿದು ಬಂದಿದೆ.

ಕಟ್ಟಡ ಶಿಥಿಲವಾಗಿದ್ರೂ ಮೂರನೇ ಮಹಡಿ ನಿರ್ಮಾಣ ಮಾಡಲು ಮಾಲಿಕನ ಯತ್ನ. ಸ್ವಯಂ ಪ್ರೇರಿತವಾಗಿಯೇ ಮನೆ ಖಾಲಿ ಮಾಡಿದ್ದ ಆರೇಳು ಕುಟುಂಬಗಳು. ಇನ್ನೂ 4 ಕುಟುಂಬ ವಾಸವಿದ್ರೂ.

ಕೆಳಮಹಡಿಯಲ್ಲಿ ತರಕಾರಿ ಅಂಗಡಿ, ಚಿಲ್ಲರೆ ಅಂಗಡಿ, ಐರನ್ ಅಂಗಡಿ, ಮಾಂಸದ ಅಂಗಡಿ ಕೆಳ ಮಹಡಿಯಲ್ಲಿತ್ತು.

ಕಟ್ಟಡ ಬೀಳುತ್ತಿದ್ದ ತಕ್ಷಣ ಹೊರಗೆ ಓಡಿಬಂದ ಅಂಗಡಿಯಲ್ಲಿದ್ದ ಜನರು. ಈ ಘಟನೆಯಲ್ಲಿ ಓರ್ವ ಮಹಿಳೆಗೆ ಗಾಯ.

ಗಾಯಗೊಂಡ ಮಹಿಳೆಯನ್ನ ಸ್ಥಳೀಯ ಆಸ್ಪತ್ರೆಗೆ ರವಾನೆ. ಸ್ಥಳಕ್ಕೆ ಜಂಟಿ ಆಯುಕ್ತರಾದ ಡಾ. ಸೌಜನ್ಯ, ಆಯುಕ್ತರಾದ ಅನಿಲ್ ಕುಮಾರ್. ಅಧಿಕಾರಿಗಳು  ಭೇಟಿ ನೀಡಿ  ಪರಿಶೀಲನೆ  ನಡೆಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos