ಅನ್ನದಾತನ ಗೋಳು ಕೇಳೋರಿಲ್ಲ

ಅನ್ನದಾತನ ಗೋಳು ಕೇಳೋರಿಲ್ಲ

ಮಂಡ್ಯ, ಏ. 04: ಕೊರೊನಾದಿಂದ ಮಂಡ್ಯ ಜಿಲ್ಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಅನ್ನದಾತ. ಜಿಲ್ಲೆಯಲ್ಲಿ ಸಂಕಷ್ಟಕ್ಕೆ  ಸಿಲುಕಿದ ಅನ್ನದಾತನ ಗೋಳು ಕೇಳೋರಿಲ್ಲ.

ಸಾಲಸೋಲ ಮಾಡಿ ಬೆಳೆದ ಬೆಳೆಗೆ ಸಿಗದ ಬೆಲೆಗೆ ಜಮೀನನಲ್ಲೆ ಬೆಳೆ ಮಣ್ಣು ಮಾಡ್ತಿರೋ ರೈತ.

ಬೆಳೆ ನಷ್ಟದಿಂದ ಕಂಗಾಲಾಗಿ ಆತ್ಮಹತ್ಯೆ ಚಿಂತನೆ ಮುಂದಾಗಿರೋ ರೈತ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬನಘಟ್ಟ ಗ್ರಾಮದ ರೈತನ ಬೆಳೆ ನಾಶ.

ಜವರೇಗೌಡ ತಮ್ಮ 3 ಎಕರೆ ಜಮೀನಿನಲ್ಲಿ ದಪ್ಪ ಮೆಣಸಿನಕಾಯಿ ಬೆಳೆದಿದ್ರು.

ಬೆಳೆ ಕೈಗೆ ಬಂದರು ಕೂಡ ಮಾರಾಟ ಮಾಡಲು ಮಾರುಕಟ್ಟೆ ಮತ್ತು ವಾಹನ ಸಿಗದೆ ಪರದಾಡುವಂತಹ ಕಠಿಣ ಪರಿಸ್ಥಿತಿ ಉಂಟಾಗಿದೆ.

ಬೆಳೆ ಕುಯ್ಲು ಮಾಡಲಾಗದೆ ಗಿಡದಲ್ಲೆ ಬಿಟ್ಟು ಗಿಡಗಳನ್ನು ಕಿತ್ತೆಸೆಯುತ್ತಿರುವ ದೃಶ್ಯಗಳು ಮನ ಕಲಕುವಂತಿದೆ. ಚುನಾವಣೆ ವೇಳೆ ಜಿಲ್ಲೆಯ ರೈತರ ನೆರವಿಗೆ ನಿಲ್ಲುತ್ತೇವೆಂದ ಜನಪ್ರತಿಗಳು ಈಗೆಲ್ಲಿ ಎಂದು ತರಾಟೆಗೆ ತೆಗುಕೊಂಡ ಅನ್ನದಾತ.

ಬೆಳೆ ನಷ್ಟದಿಂದ ಲಕ್ಷಾಂತರ ರೂ ನಷ್ಟವಾಗಿ ಬೀದಿಗೆ ಬೀಳುವ ಆತಂಕದಲ್ಲಿ ರೈತ ಕುಟುಂಬ ಬೆಳೆ ನಷ್ಟ ಪರಿಹಾರಕ್ಕೆ ಮನವಿ.

 

ಫ್ರೆಶ್ ನ್ಯೂಸ್

Latest Posts

Featured Videos