ಅಯೋಧ್ಯೆ ಟ್ರಸ್ಟ್‌ ಗೆ ಅಂಜನಾದ್ರಿ ಬೆಟ್ಟ

ಅಯೋಧ್ಯೆ ಟ್ರಸ್ಟ್‌ ಗೆ ಅಂಜನಾದ್ರಿ ಬೆಟ್ಟ

ಗಂಗಾವತಿ, ಡಿ. 20: ಪ್ರಸ್ತಾವಿತ ಅಯೋಧ್ಯೆ ಶ್ರೀರಾಮಮಂದಿರ ಟ್ರಸ್ಟ್‌ನಲ್ಲಿ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಸೇರಿದಂತೆ ರಾಮಾಯಣದಲ್ಲಿ ಉಲ್ಲೇಖೀತ ಪ್ರದೇಶಗಳನ್ನು ಸೇರ್ಪಡೆ ಮಾಡಿ ಶ್ರೀರಾಮಮಂದಿರ ನಿರ್ಮಾಣ ಜತೆಯಲ್ಲೇ ಶ್ರೀರಾಮಚಂದ್ರ ನಡೆದಾಡಿದ ಸ್ಥಳಗಳ ಅಭಿವೃದ್ಧಿಗೆ ಚಿಂತನೆ ಮಾಡಿದೆ.

ಕೇಂದ್ರ ಸರ್ಕಾರ ಈಗಾಗಲೇ ಜಾರಿ ಮಾಡಿರುವ ಶ್ರೀರಾಮಸರ್ಕ್ನೂಟ್‌ ಯೋಜನೆಯಡಿ ಅಂಜನಾದ್ರಿ ಬೆಟ್ಟವನ್ನು ಸೇರ್ಪಡೆ ಮಾಡಲಾಗಿದೆ. ಅಯೋಧ್ಯೆ ಟ್ರಸ್ಟ್‌ ನಡಿ ಅಂಜನಾದ್ರಿಬೆಟ್ಟ, ಋಷಿಮುಖ ಪರ್ವತ, ಪಂಪಾ ಸರೋವರ, ಶಬರಿ ಗುಹೆ ಹಾಗೂ ಆನೆಗೊಂದಿ ಪ್ರದೇಶದ ಇತರೆ ಸ್ಥಳಗಳನ್ನು ಸೇರಿಸಿ ಪ್ರವಾಸೋದ್ಯಮದ ದೃಷ್ಟಿಯಿಂದ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಹೇಳಲಾಗಿದೆ.

ಪ್ರತಿ ವರ್ಷ ಅಂಜನಾದ್ರಿಗೆ ಸಾವಿರಾರು ಸಾಧು-ಸಂತರು ಮತ್ತು ಉತ್ತರಭಾರತದ ಭೇಟಿ ನೀಡುತ್ತಾರೆ. ಅಯೋಧ್ಯೆ ಟ್ರಸ್ಟ್‌ನಲ್ಲಿ ಆನೆಗೊಂದಿ ಭಾಗ ಸೇರ್ಪಡೆಯಾದರೆ ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾನ ಪಡೆದು ಮೂಲಸೌಕರ್ಯ ಹೆಚ್ಚಳಕ್ಕೆ ನೆರವಾಗಲಿದೆ.

 

ಫ್ರೆಶ್ ನ್ಯೂಸ್

Latest Posts

Featured Videos