ಅನಿವಾರ್ಯತೆಯಿಂದ ಜೆಡಿಎಸ್ ಗೆ ಬೆಂಬಲ ನೀಡಿದ್ದೇವೆ: ಬಸವರಾಜ್ ರಾಯರೆಡ್ಡಿ

ಅನಿವಾರ್ಯತೆಯಿಂದ ಜೆಡಿಎಸ್ ಗೆ ಬೆಂಬಲ ನೀಡಿದ್ದೇವೆ: ಬಸವರಾಜ್ ರಾಯರೆಡ್ಡಿ

ಬೆಂಗಳೂರು: ಕಾಂಗ್ರೆಸ್ ನ ಮಾಜಿ ಶಾಸಕ ಬಸವರಾಜರಾಯ ರೆಡ್ಡಿ ಅವರು ಅನಿವಾರ್ಯತೆಯಿಂದ ಜೆಡಿಎಸ್ ಗೆ ಬೆಂಬಲ ನೀಡಿದ್ದೇವೆ ಎಂದು ಹೇಳುವ ಮೂಲಕ ಸಿಎಂ ಕುಮಾರಸ್ವಾಮಿಯವರಿಗೆ ಚುರುಕು ಮುಟ್ಟಿಸಿದ್ದಾರೆ.

ನಗರದಲ್ಲಿ
ಮಾತನಾಡಿದ ಅವರು, ನಮ್ಮ ಪಕ್ಷದ ಔದಾರ್ಯವನ್ನು ಮುಖ್ಯಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕು. ಚಿಕ್ಕಪುಟ್ಟ ವಿಷಯಗಳಿಗೆ ರಾಜೀನಾಮೆ ನೀಡುತ್ತೇನೆ ಅನ್ನೋದು ತಪ್ಪು. ಕಾಂಗ್ರೆಸ್ ಶಾಸಕರನ್ನು ಕಂಟ್ರೋಲ್ ಮಾಡಿ ಅಂದಿದ್ದು ತಪ್ಪು ಎಂದು ಮಾಜಿ ಸಚಿವ ಬಸವರಾಜರಾಯ ರೆಡ್ಡಿ ಹೇಳಿದರು.

ಇನ್ನು, ಸಿದ್ದರಾಮಯ್ಯ ಅವರನ್ನ ಹೊಗಳಿದರೆ ತಪ್ಪೇನು? ಅವರೇ ತ್ಯಾಗ ಮಾಡಿದ್ದಾರೆ. ಸಿದ್ದರಾಮಯ್ಯ ಒಬ್ಬ ಪ್ರಶ್ನಾತೀತ, ವರ್ಣರಂಜಿತ ಕಳೆದ ಇಪ್ಪತ್ತು ವರ್ಷಗಳಲ್ಲಿ ದಿ ಬೆಸ್ಟ್ ಮುಖ್ಯಮಂತ್ರಿಯಾಗಿದ್ದರು.

ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲಿ ಅಂತ ನಾನೂ ಹೇಳ್ತೇನೆ. ಸಿಎಂ ಕುಮಾರಸ್ವಾಮಿಯವರಿಗೆ ಇನ್ನಷ್ಟು ತಾಳ್ಮೆ ಮತ್ತು ಪ್ರಬುದ್ಧತೆ ಬರಲಿ ಎಂದು ಮಾಜಿ ಸಚಿವ ಬಸವರಾಯ ರೆಡ್ಡಿ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos