ನೆಟ್​ಫ್ಲಿಕ್ಸ್ ನಲ್ಲಿ ಅನಿಮಲ್‌

ನೆಟ್​ಫ್ಲಿಕ್ಸ್ ನಲ್ಲಿ ಅನಿಮಲ್‌

ಬೆಂಗಳೂರು: ‘ಅನಿಮಲ್​’ ಸಿನಿಮಾ ಭಾರತದ ಬಾಕ್ಸ್​ ಆಫೀಸ್​ನಲ್ಲಿ 555 ಕೋಟಿ ರೂಪಾಯಿಗೂ ಹೆಚ್ಚು ಕಮಾಯಿ ಮಾಡಿದೆ. ವಿಶ್ವ ಬಾಕ್ಸ್​ ಆಫೀಸ್​ನ ಲೆಕ್ಕವೂ ಸೇರಿದರೆ 900 ಕೋಟಿ ರೂಪಾಯಿ ಮೀರುತ್ತದೆ. ಈ ಸಿನಿಮಾ ಇಷ್ಟೆಲ್ಲ ಸದ್ದು ಮಾಡಲು ಹಲವು ಕಾರಣಗಳಿವೆ. ಬಿಡುಗಡೆ ಆದ ದಿನದಿಂದಲೇ ಈ ಸಿನಿಮಾ ವಿವಾದದ ಸುಳಿಗೆ ಸಿಲುಕಿತ್ತು. ಆದರೂ ಕೂಡ ಪ್ರೇಕ್ಷಕರು ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ.

‘ಅನಿಮಲ್​’ ಸಿನಿಮಾ ಯಾವಾಗ ಒಟಿಟಿಗೆ ಬರಲಿದೆ ಎಂದು ಸಿನಿಪ್ರಿಯರು ಕೇಳುತ್ತಲೇ ಇದ್ದರು. ಈಗ ಅವರ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನಿರ್ಮಾಪಕರ ಕಡೆಯಿಂದ ‘ಅನಿಮಲ್’​ ಸಿನಿಮಾದ ಒಟಿಟಿ ರಿಲೀಸ್ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ. ಜನವರಿ 26ರಂದು ‘ಅನಿಮಲ್​’ ಸಿನಿಮಾ ಒಟಿಟಿಯಲ್ಲಿ ಲಭ್ಯವಾಗುತ್ತಿದೆ. ನೆಟ್​ಫ್ಲಿಕ್ಸ್​ ಮೂಲಕ ಈ ಚಿತ್ರದ ಸ್ಟ್ರೀಮಿಂಗ್​ ಆರಂಭ ಆಗುತ್ತಿದೆ. ರಣಬೀರ್​ ಕಪೂರ್​ ಅವರಿಗೆ ಈ ಚಿತ್ರದಿಂದ ಬಹು ದೊಡ್ಡ ಯಶಸ್ಸು ಸಿಕ್ಕಿದೆ. ರಶ್ಮಿಕಾ ಮಂದಣ್ಣ ಅವರ ಚಾರ್ಮ್​ ಕೂಡ ಹೆಚ್ಚಾಗಿದೆ. ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ ಅವರ ಡಿಮ್ಯಾಂಡ್​ ಡಬಲ್​ ಆಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos